ಐಷಾರಾಮಿ ಹೋಟೆಲ್'ನಲ್ಲಿ ತಂಗಿದ್ದರೂ ಹಣವಿಲ್ಲದೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಕಿರಿಯ ಕ್ರಿಕೆಟಿಗರಿಗೆ ಬಂದೊದಗಿದೆ.
ನವದೆಹಲಿ(ಫೆ.08): ನ್ಯಾ. ಲೋಧಾ ಸಮಿತಿಯ ಎಫೆಕ್ಟ್‌ನಿಂದಾಗಿ ಭಾರತ ಕಿರಿಯರ ತಂಡಕ್ಕೆ ಇದುವರೆಗೂ ಪ್ರತಿದಿನದ ಭತ್ಯೆ ಸಿಕ್ಕಿಲ್ಲ ಎಂದು ಮಾಜಿ ಕ್ರಿಕೆಟಿಗ ಮತ್ತು ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಜಯ್ ಶಿರ್ಕೆ ಅಧಿಕಾರ ಕಳೆದುಕೊಂಡಿದ್ದರು. ಆ ನಂತರ ಬಿಸಿಸಿಐನಿಂದ ಆಟಗಾರರಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸದ್ಯ ಭಾರತ ಕಿರಿಯರ ತಂಡ, ಇಂಗ್ಲೆಂಡ್ ವಿರುದ್ಧದ ಸರಣಿಯನ್ನಾಡುತ್ತಿದೆ. ಭಾರತ ಕಿರಿಯರ ತಂಡ ಪ್ರತಿದಿನ ಪಡೆಯುತ್ತಿದ್ದ 6,800 ರೂಪಾಯಿ ಭತ್ಯೆ ಕೊಡದೆ ಇರುವುದು ಕೆಲ ಆಟಗಾರರಿಗೆ ತೊಂದರೆಯಾಗಿದೆ. ಹೀಗಾಗಿ ಸ್ಥಳೀಯ ಆಟಗಾರರು ಮನೆಯಿಂದಲೇ ಊಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಆಟಗಾರರು ಮಾತ್ರವಲ್ಲದೇ ಕೋಚ್ ದ್ರಾವಿಡ್, ಸಿಬ್ಬಂದಿಗೂ ಸರಿಯಾಗಿ ಭತ್ಯೆ ಸಿಕ್ಕಿಲ್ಲ. ಐಷಾರಾಮಿ ಹೋಟೆಲ್'ನಲ್ಲಿ ತಂಗಿದ್ದರೂ ಹಣವಿಲ್ಲದೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಕಿರಿಯ ಕ್ರಿಕೆಟಿಗರಿಗೆ ಬಂದೊದಗಿದೆ.
