ಕೂಟದಲ್ಲಿ ಭಾರತ ಪರ ಶಾಹಜರ್ ರಿಜ್ವಿ, ಮನು ಭಾಕರ್, ಅಖಿಲ್ ಶೆರೋನ್ ಹಾಗೂ ಓಂ ಪ್ರಕಾಶ್ ಚಿನ್ನ ಗೆದ್ದರೆ, ಅಂಜುಮ್ ಮೌದ್ಗಿಲ್ ಬೆಳ್ಳಿ, ಜಿತು ರೈ, ರವಿಕುಮಾರ್, ಮೆಹುಲಿ ಘೋಷ್ ಕಂಚು ಗೆದ್ದಿದ್ದರು.
ನವದೆಹಲಿ(ಮಾ.13): ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್'ನಲ್ಲಿ ಮೊದಲ ಬಾರಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಮೆಕ್ಸಿಕೊದ ಗ್ವಾಡಲಜರದಲ್ಲಿ ಭಾನುವಾರ ಮುಕ್ತಾಯಗೊಂಡ ವಿಶ್ವಕಪ್ ಅನ್ನು ಭಾರತ 4 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಮುಕ್ತಾಯಗೊಳಿಸಿತು.
ಕೂಟದ ಅಂತಿಮ ದಿನವಾದ ಭಾನುವಾರ, ಪುರುಷರ ಸ್ಕೀಟ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮೂವರು ಶೂಟರ್'ಗಳು ಕಣದಲ್ಲಿದ್ದರು. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಕೂಟದಲ್ಲಿ ಭಾರತ ಪರ ಶಾಹಜರ್ ರಿಜ್ವಿ, ಮನು ಭಾಕರ್, ಅಖಿಲ್ ಶೆರೋನ್ ಹಾಗೂ ಓಂ ಪ್ರಕಾಶ್ ಚಿನ್ನ ಗೆದ್ದರೆ, ಅಂಜುಮ್ ಮೌದ್ಗಿಲ್ ಬೆಳ್ಳಿ, ಜಿತು ರೈ, ರವಿಕುಮಾರ್, ಮೆಹುಲಿ ಘೋಷ್ ಕಂಚು ಗೆದ್ದಿದ್ದರು.
ಭಾರತೀಯ ಶೂಟರ್'ಗಳ ಸಾಧನೆಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿನಂದನೆ ಸಲ್ಲಿಸಿದ್ದಾರೆ.
