2016ರಲ್ಲಿ ಟೀಂ ಇಂಡಿಯಾ ವೆಸ್ಟ್'ಇಂಡಿಸ್ ಪ್ರವಾಸ ಕೈಗೊಂಡಿತ್ತು. ಆಗ ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನಾಡಿತ್ತು, ಆದರೆ ಏಕದಿನ ಪಂದ್ಯಗಳನ್ನಾಡಿರಲಿಲ್ಲ.

ನವದೆಹಲಿ(ಮೇ.17): ಭಾರತೀಯ ಕ್ರಿಕೆಟ್‌ ತಂಡ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಮುಕ್ತಾಯಗೊಂಡ ಬಳಿಕ, ಸೀಮಿತ ಓವರ್‌'ಗಳ ಸರಣಿಯಾಡಲು ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ.

ಜೂನ್‌ 23ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, 5 ಏಕದಿನ ಹಾಗೂ ಒಂದು ಟಿ20 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಆದರೆ ವೆಸ್ಟ್'ಇಂಡಿಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ತಂಡವನ್ನು ಪ್ರಕಟಿಸಿಲ್ಲ.

2013ರಿಂದ ಇಲ್ಲಿಯವರೆಗೆ ನಾಲ್ಕನೇ ದ್ವಿಪಕ್ಷಿಯ ಟೂರ್ನಿಯಾಗಿದೆ. 2016ರಲ್ಲಿ ಟೀಂ ಇಂಡಿಯಾ ವೆಸ್ಟ್'ಇಂಡಿಸ್ ಪ್ರವಾಸ ಕೈಗೊಂಡಿತ್ತು. ಆಗ ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನಾಡಿತ್ತು, ಆದರೆ ಏಕದಿನ ಪಂದ್ಯಗಳನ್ನಾಡಿರಲಿಲ್ಲ.

ಪಂದ್ಯಾವಳಿಯವೇಳಾಪಟ್ಟಿ ಇಂತಿದೆ:

ಜೂನ್‌ 23: ಮೊದಲ ಏಕದಿನ, ಟ್ರಿನಿಡಾಡ್‌

ಜೂನ್‌ 25: ಎರಡನೇ ಏಕದಿನ, ಟ್ರಿನಿಡಾಡ್‌

ಜೂನ್‌ 30: ಮೂರನೇ ಏಕದಿನ, ಆ್ಯಂಟಿಗಾ

ಜುಲೈ 4: ನಾಲ್ಕನೇ ಏಕದಿನ, ಆ್ಯಂಟಿಗಾ

ಜುಲೈ 6: ಐದನೇ ಏಕದಿನ, ಜಮೈಕಾ

ಜುಲೈ 9: ಮೊದಲ ಟಿ20, ಜಮೈಕಾ