ಮೆಲ್ಬರ್ನ್‌: ಮುಂದಿನ ವರ್ಷ ಜನವರಿಯಲ್ಲಿ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ. 

ಐಸಿಸಿಯ ಭವಿಷ್ಯದ ಪಂದ್ಯಾವಳಿ ಪಟ್ಟಿ ಪ್ರಕಾರ, ಜನವರಿಯಲ್ಲಿ ಆಸ್ಪ್ರೇಲಿಯಾ ತಂಡ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿಯನ್ನು ಆಡಬೇಕಿತ್ತು. ಆದರೆ ಬಿಸಿಸಿಐ ಒತ್ತಡ ಹೇರಿದ ಕಾರಣ, ನ್ಯೂಜಿಲೆಂಡ್‌ ಸರಣಿಯನ್ನು ಕೈಬಿಟ್ಟು ಭಾರತಕ್ಕೆ ತಂಡವನ್ನು ಕಳುಹಿಸಲು ಕ್ರಿಕೆಟ್‌ ಆಸ್ಪ್ರೇಲಿಯಾ ಒಪ್ಪಿಕೊಂಡಿದೆ. 

ಸರಣಿಯನ್ನು ಮುಂದೂಡುವಂತೆ ಕ್ರಿಕೆಟ್‌ ಆಸ್ಪ್ರೇಲಿಯಾ, ಬಿಸಿಸಿಐಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಭಾರತೀಯ ಕ್ರಿಕೆಟ್‌ ಮಂಡಳಿ ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದ ಕಾರಣ, ಕ್ರಿಕೆಟ್‌ ಆಸ್ಪ್ರೇಲಿಯಾ ಬೇರೆ ದಾರಿಯಿಲ್ಲದೆ ಒಪ್ಪಿಕೊಂಡಿದೆ ಎಂದು ಆಸ್ಪ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.