2019ರಿಂದ 2023ರ ವರೆಗಿನ ಭವಿಷ್ಯದ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ತವರಿನಲ್ಲಿ 81 ಪಂದ್ಯಗಳನ್ನು ಆಡಲಿದ್ದು, ಆಡುವ ದಿನಗಳನ್ನು 390ರಿಂದ 306ಕ್ಕೆ ಇಳಿಸಲಾಗಿದೆ ಎಂದು ವಿಶೇಷ ಸಾಮಾನ್ಯ ಸಭೆ ಬಳಿಕ ಬಿಸಿಸಿಐ ಘೋಷಿಸಿತು.

ನವದೆಹಲಿ(ಡಿ.12): ಭಾರತೀಯ ಕ್ರಿಕೆಟಿಗರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವಂತೆ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019ರಿಂದ 2023ರ ವರೆಗಿನ ಭವಿಷ್ಯದ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ತವರಿನಲ್ಲಿ 81 ಪಂದ್ಯಗಳನ್ನು ಆಡಲಿದ್ದು, ಆಡುವ ದಿನಗಳನ್ನು 390ರಿಂದ 306ಕ್ಕೆ ಇಳಿಸಲಾಗಿದೆ ಎಂದು ವಿಶೇಷ ಸಾಮಾನ್ಯ ಸಭೆ ಬಳಿಕ ಬಿಸಿಸಿಐ ಘೋಷಿಸಿತು. ಆಡುವ ದಿನಗಳನ್ನು ಕಡಿತಗೊಳಿಸಿದ್ದು, ಭಾರತ ಈ ಮೊದಲು ಪ್ರಸ್ತಾಪಿಸಿದ್ದಕ್ಕಿಂತ 30 ಅಧಿಕ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಹೆಚ್ಚಿನವು ಟಿ20 ಪಂದ್ಯಗಳಾಗಿರಲಿವೆ ಎನ್ನಲಾಗಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಕೆಳ ಕ್ರಮಾಂಕದಲ್ಲಿರುವ ತಂಡಗಳ ವಿರುದ್ಧದ ಸರಣಿಗಳನ್ನು ಅನವಶ್ಯಕವಾಗಿ ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದೇ ವೇಳೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದ.ಆಫ್ರಿಕಾ ವಿರುದ್ಧ ಹೆಚ್ಚಿನ ಸರಣಿಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದ 3 ಸದಸ್ಯರ ಕಾರ್ಯಕಾರಿ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇದೇವೇಳೆ ಭಾರತೀಯ ಕ್ರಿಕೆಟಿಗರ ಡೋಪಿಂಗ್ ಟೆಸ್ಟ್ ನಡೆಸುವ ಅಧಿಕಾರವನ್ನು ನಾಡಾಗೆ ನೀಡಬಾರದು ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು.