ಭಾರತ-ದ.ಆಫ್ರಿಕಾ ನಡುವಿನ ಸರಣಿಗೆ ‘ಫ್ರೀಡಂ ಸೀರೀಸ್’ ಎಂದು ನಾಮಕಾರಣ ಮಾಡಿದ್ದು, ಮಹಾತ್ಮ ಗಾಂಧೀಜಿ ಹಾಗೂ ನೆಲ್ಸನ್ ಮಂಡೆಲಾರಿಗೆ ಗೌರವ ಅರ್ಪಿಸಿದೆ. ಪ್ರೊಮೋದಲ್ಲೂ ಗಾಂಧೀಜಿ ಅವರ ವಿಡಿಯೋವನ್ನು ಬಳಸುವ ಮೂಲಕ ಗಾಂಧಿ ಬಗ್ಗೆ ದಕ್ಷಿಣ ಆಫ್ರಿಕನ್ನರಿಗೆ ಇರುವ ಗೌರವ ಎಷ್ಟೆಂಬುದನ್ನು ತೋರಿಸಿದೆ.
ಕೇಪ್'ಟೌನ್(ಜ.03): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸುದೀರ್ಘ ಸರಣಿ ಏರ್ಪಡಿಸಿರುವ ಕ್ರಿಕೆಟ್ ದ.ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನವೇ ವಿಶೇಷ ಪ್ರೊಮೋ ಮೂಲಕ ಭಾರತೀಯರ ಮನ ಗೆದ್ದಿದೆ.
ಭಾರತ-ದ.ಆಫ್ರಿಕಾ ನಡುವಿನ ಸರಣಿಗೆ ‘ಫ್ರೀಡಂ ಸೀರೀಸ್’ ಎಂದು ನಾಮಕಾರಣ ಮಾಡಿದ್ದು, ಮಹಾತ್ಮ ಗಾಂಧೀಜಿ ಹಾಗೂ ನೆಲ್ಸನ್ ಮಂಡೆಲಾರಿಗೆ ಗೌರವ ಅರ್ಪಿಸಿದೆ. ಪ್ರೊಮೋದಲ್ಲೂ ಗಾಂಧೀಜಿ ಅವರ ವಿಡಿಯೋವನ್ನು ಬಳಸುವ ಮೂಲಕ ಗಾಂಧಿ ಬಗ್ಗೆ ದಕ್ಷಿಣ ಆಫ್ರಿಕನ್ನರಿಗೆ ಇರುವ ಗೌರವ ಎಷ್ಟೆಂಬುದನ್ನು ತೋರಿಸಿದೆ.
ನಿಷೇಧದ ಬಳಿಕ 1992ರಲ್ಲಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಮರಳಿದಾಗ, ಮೊದಲು ಆಫ್ರಿಕಾ ಪ್ರವಾಸ ಕೈಗೊಂಡಿದ್ದು ಭಾರತ. ಹೀಗಾಗಿ, ಆಫ್ರಿಕಾ ಕ್ರಿಕೆಟ್ ಸಂಸ್ಥೆ ಪ್ರೊಮೋದಲ್ಲಿ ಭಾರತಕ್ಕೆ ಮತ್ತೊಮ್ಮೆ ಧನ್ಯವಾದ ತಿಳಿಸಿದೆ.