ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಭಾರತಕ್ಕೆ ಕೌಂಟರ್ ನೀಡಲು ರೆಡಿಯಾದ ICC
ಪುಲ್ವಾಮಾ ದಾಳಿಯಿಂದ ಪಾಕಿಸ್ತಾನ ವಿರುದ್ದ ವಿಶ್ವಕಪ್ ಪಂದ್ಯ ಬಹಿಷ್ಕರಿಲು ಭಾರತ ಚಿಂತಿಸುತ್ತಿದೆ. ಆದರೆ ಒಂದು ವೇಳೆ ಭಾರತ ಪಾಕ್ ವಿರುದ್ದದ ಪಂದ್ಯ ಬಹಿಷ್ಕರಿಸಿದರೆ, ಬಿಸಿಸಿಐ ತಿರುಗೇಟು ನೀಡಲು ಐಸಿಸಿ ಮುಂದಾಗಿದೆ.
ದುಬೈ(ಫೆ.21): ಪುಲ್ವಾಮಾ ದಾಳಿ ಬಿಸಿ ಇನ್ನೂ ಆರಿಲ್ಲ. ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು ಒತ್ತಡ ಹೆಚ್ಚಾಗುತ್ತಿದೆ. ಇತ್ತ ಬಿಸಿಸಿಐ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದೆ. ಆದರೆ ಈ ಬೆಳವಣಿಗಗಳಿಂದ ತಲೆಕೆಡಿಸಿಕೊಂಡಿರುವ ಐಸಿಸಿ, ಬಿಸಿಸಿಐ ಮನವೊಲಿಸಲು ಮುಂದಾಗಿದೆ. ಐಸಿಸಿ ಮಾತಿಗೆ ಒಪ್ಪದಿದ್ದರೆ ಇದೀಗ ಕೌಂಟರ್ ನೀಡಲು ಐಸಿಸಿ ರೆಡಿಯಾಗಲಿದೆ ಅನ್ನೋ ಮಾಹಿತಿಯನ್ನ ಹೊರಬಿದ್ದಿದೆ.
ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಬೆಚ್ಚಿ ಬಿದ್ದ ICC
ಭಾರತ ಹಾಗೂ ಪಾಕಿಸ್ತಾನ ಪಂದ್ಯ ರದ್ದಾದರೆ ಸಂಪೂರ್ಣ ಟೂರ್ನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಈ ಪಂದ್ಯದ ಪ್ರಾಯೋಜಕತ್ವ, ಜಾಹೀರಾತು ಸೇರಿದಂತೆ ಹಲವು ವಾಣಿಜ್ಯ ಒಪ್ಪಂದಗಳು ಮುರಿದುಬೀಳಲಿದೆ. ಇದು ಐಸಿಸಿಗೆ ದೊಡ್ಡ ಹೊಡೆತ ನೀಡಲಿದೆ. ಹೀಗಾಗಿ ಭಾರತ ಪಾಕಿಸ್ತಾನ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ, ಐಸಿಸಿ ತಿರುಗೇಟು ನೀಡೋ ಸಾಧ್ಯತೆ ಹೆಚ್ಚು ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿದೆ.
ಇದನ್ನೂ ಓದಿ: ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ಬೇಡ: ಗಂಗೂಲಿ!
ಪಾಕಿಸ್ತಾನವನ್ನ ದೂರವಿಡುವ ಈ ನಿರ್ಧಾರ ಭಾರತಕ್ಕೆ ತಿರುಗುಬಾಣವಾಗಲಿದೆ. ಬಿಸಿಸಿಐ ಪಂದ್ಯ ಬಹಿಷ್ಕಾರದ ನಿರ್ಧಾರ ತಳೆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಿಸಿಸಿಐಯನ್ನೇ ನಿಷೇಧಿಸುವ ಸಾಧ್ಯತೆ ಇದೆ. ಹೀಗಾಗಿ ಇಂಡೋ-ಪಾಕ್ ವಿಶ್ವಕಪ್ ಪಂದ್ಯದ ಕುರಿತು ಆತುರದ ನಿರ್ಧಾರ ಒಳಿತಲ್ಲ ಎಂದಿದ್ದಾರೆ
ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ- ಕೇಂದ್ರ ಸರ್ಕಾರದ ನಿರ್ಧಾರ ಅಂತಿಮ!
ಪಂದ್ಯ ಬಹಿಷ್ಕರಿಸುವದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಕ್ರೀಡೆ ಜೊತೆ ರಾಜಕೀಯ ಬೆರಿಸಿದ ಆರೋಪಗಳು ಕೇಳಿಬರುವ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿ ರದ್ದು ಮಾಡುವುದು ಸೂಕ್ತ. ಆದರೆ ಐಸಿಸಿ ಪಂದ್ಯಗಳಿಂದ ಹಿಂದೆ ಸರಿಯುವುದು ಸೂಕ್ತವಲ್ಲ. ಇದರಿಂದ ಪಾಕಿಸ್ತಾನಕ್ಕೆ ಲಾಭವೇ ಹೊರತು ನಷ್ಟವಿಲ್ಲ ಎಂದಿದ್ದಾರೆ.