ಅಂತಿಮ ಟೆಸ್ಟ್: ಭಾರತ 247ಕ್ಕೆ ಆಲೌಟ್,ಆಫ್ರಿಕಾಕ್ಕೆ ಆರಂಭದಲ್ಲೇ ಶಾಕ್

First Published 26, Jan 2018, 8:30 PM IST
India set South Africa mammoth 241 run target to win in final Test
Highlights

ಕೊಹ್ಲಿ (41),ರಹಾನೆ(48), ಭುವಿ(33), ಶಮಿ(27) ಹಾಗೂ ಮುರಳಿ ವಿಜಯ್(25) ಅವರ ಸಮಯೋಚಿತ ಆಟದಿಂದ 247 ರನ್ ಗಳಿಸಿ ಹರಿಣಿ ತಂಡಕ್ಕೆ 241 ರನ್ ಟಾರ್ಗೆಟ್ ನೀಡಿದೆ.

ಜೋಹಾನ್ಸ್'ಬರ್ಗ್(ಜ.26): ಮೂರನೇ ಟೆಸ್ಟ್ ರೋಚಕ ಘಟ್ಟ ತಲುಪುವ ಸಾಧ್ಯತೆಯಿದೆ. ಈಗಾಗಲೇ 2 ಪಂದ್ಯಗಳನ್ನು ಸೋತು ಸರಣಿ ಕೈಬಿಟ್ಟಿರುವ ವಿರಾಟ್ ಕೊಹ್ಲಿ ಪಡೆಗೆ ಅಂತಿಮ ಟೆಸ್ಟ್ ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಮೂರನೇ ದಿನದಾಟದಲ್ಲಿ 49/1 ರನ್'ನೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಹೆಚ್ಚು ರನ್ ಗಳಿಸದಿದ್ದರೂ ನಾಯಕ ಕೊಹ್ಲಿ (41),ರಹಾನೆ(48), ಭುವಿ(33), ಶಮಿ(27) ಹಾಗೂ ಮುರಳಿ ವಿಜಯ್(25) ಅವರ ಸಮಯೋಚಿತ ಆಟದಿಂದ 247 ರನ್ ಗಳಿಸಿ ಹರಿಣಿ ತಂಡಕ್ಕೆ 241 ರನ್ ಟಾರ್ಗೆಟ್ ನೀಡಿದೆ.

ಅತಿಥೇಯ ತಂಡದ ಪರ ಫಿಲೆಂಡರ್ 61/3,ರಬಡಾ 69/3, ಮಾರ್ಕಲ್ 47/3 ವಿಕೇಟ್'ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿದರು.  ಸುಲಭ ಮೊತ್ತವನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಶಮಿ ಬೌಲಿಂಗ್'ನಲ್ಲಿ  ಮಾರ್ಕಮ್ ಅವರ ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಸ್ಕೋರ್

ಭಾರತ 187 ಮತ್ತು 247

ದಕ್ಷಿಣ ಆಫ್ರಿಕಾ

194 ಹಾಗೂ 10/1

(ವಿವರ ಅಪೂರ್ಣ)

loader