ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ಏಕೈಕ ಅಂಪೈರ್‌ಗೆ ಸಂಕಷ್ಟ ಎದುರಾಗಿದೆ. ಇಷ್ಟು ದಿನ ಯಾವುದೇ ಸಮಸ್ಯೆ ಇಲ್ಲದೆ ಮುನ್ನಡೆಯುತ್ತಿದ್ದ ಐಸಿಸಿ ಎಲೈಟ್ ಅಂಪೈರ್‌ಗೆ ಇದೀಗ ದಿಢೀರ್ ಎದುರಾದ ಸಂಕಷ್ಟವೇನು? ಇಲ್ಲಿದೆ ವಿವರ.

ನವದೆಹಲಿ(ಮೇ.02): ಐಸಿಸಿ ವಿಶ್ವಕಪ್ ಟೂರ್ನಿಗೆ ಅಂತಿಮ ಕಸರತ್ತು ನಡೆಯುತ್ತಿದೆ. ಟೂರ್ನಿಗೆ ಆಯ್ಕೆಯಾಗಿದ್ದ ಏಕೈಕ ಭಾರತದ ಅಂಪೈರ್ ಎಸ್ ರವಿಗೆ ಇದೀಗ ಸಂಕಷ್ಠ ಶುರುವಾಗಿದೆ. ಎಲೈಟ್‌ ಅಂಪೈರ್‌ ಸಮಿತಿಯಿಂದ ಭಾರತದ ಎಸ್‌.ರವಿಯನ್ನು ಕೈಬಿಡಲು ಐಸಿಸಿ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಬಿಡುವಿಲ್ಲದ ಕ್ರಿಕೆಟ್: ಭಾರತ- ವಿಂಡೀಸ್ ಸರಣಿ ಮುಂದೂಡಿಕೆ!

ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತದ ಏಕೈಕ ಅಂಪೈರ್‌ ಎನಿಸಿರುವ ರವಿ, ವಿಶ್ವಕಪ್‌ ಬಳಿಕ ಪ್ರಕಟಗೊಳ್ಳಲಿರುವ ನೂತನ ಪಟ್ಟಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ವರ್ಷದುದ್ದಕ್ಕೂ ಅಂಪೈರ್‌ಗಳ ಪ್ರದರ್ಶನದ ಮೇಲೆ ಐಸಿಸಿ ಕಣ್ಣಿಡಲಿದ್ದು, ಕಳಪೆ ಅಂಪೈರಿಂಗ್‌ನಿಂದ ರವಿ ಸಾಕಷ್ಟುಅಂಕ ಕಳೆದುಕೊಂಡು ಕೊನೆ ಸ್ಥಾನದಲ್ಲಿದ್ದಾರೆ.