Asianet Suvarna News Asianet Suvarna News

ಮೂರೂ ಮಾದರಿಯಲ್ಲೂ ನಂ.1 ಸ್ಥಾನಕ್ಕೇರುವತ್ತ ಟೀಂ ಇಂಡಿಯಾ

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿರುವ ಭಾರತದ ಮುಂದಿನ ಗುರಿ, ಟಿ20ಯಲ್ಲೂ ಅಗ್ರಸ್ಥಾನಕ್ಕೇರುವುದಾಗಿದೆ. ಆದರೆ ಇದು ಅಷ್ಟು ಸುಲಭವಲ್ಲ. ಪ್ರಸ್ತುತ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಇನ್ನೊಂದು ಪಂದ್ಯ ಸೋತರೂ, ಭಾರತ 2ನೇ ಸ್ಥಾನಕ್ಕೇರಲಿದ್ದು, ಕಿವೀಸ್ 3ನೇ ಸ್ಥಾನಕ್ಕೆ ಕುಸಿಯಲಿದೆ.

India rise to No 1 in ODI rankings

ದುಬೈ(ಫೆ.15): ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಭಾರತ ತಂಡ, ಐಸಿಸಿ ಏಕದಿನ ಕ್ರಿಕೆಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮಂಗಳವಾರ ಪೋರ್ಟ್ ಎಲಿಜೆಬೆತ್‌'ನಲ್ಲಿ ನಡೆದ ಆಫ್ರಿಕಾ ವಿರುದ್ಧ 5ನೇ ಏಕದಿನ ಪಂದ್ಯವನ್ನು ಗೆದ್ದ ಭಾರತ, 6 ಪಂದ್ಯಗಳ ಸರಣಿಯಲ್ಲಿ 4-1ರ ಮುನ್ನಡೆ ಸಾಧಿಸಿದೆ. ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಾಗಲೇ ಭಾರತ ನಂ.1 ಸ್ಥಾನಕ್ಕೇರಿತ್ತು. ಆದರೆ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ತಂಡ, ಕನಿಷ್ಠ 4-2ರಿಂದ ಸರಣಿ ಗೆಲ್ಲಬೇಕಿತ್ತು. ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ, 2017ರ ಅಕ್ಟೋಬರ್ ನಂತರ ಮತ್ತೊಮ್ಮೆ ನಂ.1 ಸ್ಥಾನವನ್ನು ಕಾಯ್ದುಕೊಳ್ಳಲಿದೆ.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿರುವ ಭಾರತದ ಮುಂದಿನ ಗುರಿ, ಟಿ20ಯಲ್ಲೂ ಅಗ್ರಸ್ಥಾನಕ್ಕೇರುವುದಾಗಿದೆ. ಆದರೆ ಇದು ಅಷ್ಟು ಸುಲಭವಲ್ಲ. ಪ್ರಸ್ತುತ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಇನ್ನೊಂದು ಪಂದ್ಯ ಸೋತರೂ, ಭಾರತ 2ನೇ ಸ್ಥಾನಕ್ಕೇರಲಿದ್ದು, ಕಿವೀಸ್ 3ನೇ ಸ್ಥಾನಕ್ಕೆ ಕುಸಿಯಲಿದೆ.

ಆದರೆ 2ನೇ ಸ್ಥಾನವನ್ನು ಕಾಯ್ದುಕೊಳ್ಳಬೇಕಿದ್ದರೆ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಫೆ.18ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಬೇಕಿದೆ. ಬಳಿಕ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟಿ20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಪಾಕಿಸ್ತಾನ 126 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಇನ್ನೂ ಕೆಲ ತಿಂಗಳುಗಳ ಕಾಲ ಮೊದಲ ಸ್ಥಾನ ಪಾಕ್ ಬಳಿಯೇ ಉಳಿಯಲಿದೆ.

Follow Us:
Download App:
  • android
  • ios