ಬೆಂಗಳೂರು: ಮಹಿಪಾಲ್‌ ಲೊಮ್ರೊರ್‌ (126) ಹಾಗೂ ಕರ್ನಾಟಕದ ಕರುಣ್‌ ನಾಯರ್‌ (90) ರನ್‌ ನೆರವಿನಿಂದ ಭಾರತ ರೆಡ್‌, ಗ್ರೀನ್‌ ವಿರುದ್ಧ ದುಲೀಪ್‌ ಟ್ರೋಫಿ ಟೂರ್ನಿಯ 3ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. 

ದುಲೀಪ್ ಟ್ರೋಫಿ 2019: ಕರುಣ್ ಅಜೇಯ ಶತಕ, ಪಂದ್ಯ ಡ್ರಾನಲ್ಲಿ ಅಂತ್ಯ

3ನೇ ದಿನವಾದ ಶನಿವಾರ 2 ವಿಕೆಟ್‌ಗೆ 140 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ರೆಡ್‌ ದಿನದಂತ್ಯಕ್ಕೆ 9 ವಿಕೆಟ್‌ಗೆ 404 ರನ್‌ಗಳಿಸಿತ್ತು. ನಾಲ್ಕನೇ ದಿನದ ಆರಂಭದಲ್ಲಿ ತನ್ನ ಖಾತೆಗೆ ಕೇವಲ 1 ರನ್ ಸೇರಿಸಿ ಆಲೌಟ್ ಆಯಿತು. ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಡಿಯಾ ಗ್ರೀನ್ ಚಹಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 26 ರನ್ ಬಾರಿಸಿದ್ದು, ಒಟ್ಟಾರೆ 25 ರನ್’ಗಳ ಮುನ್ನಡೆ ಪಡೆದಿದೆ. 

ಇಂಡಿಯಾ ಗ್ರೀನ್‌ ಮೊದಲ ಇನ್ನಿಂಗ್ಸ್‌ನಲ್ಲಿ 440 ರನ್‌ಗಳಿಗೆ ಆಲೌಟ್‌ ಆಗಿತ್ತು. ಇಂದು ಪಂದ್ಯದ ಕೊನೆಯ ದಿನವಾಗಿದ್ದು, ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ. 

ಸ್ಕೋರ್‌:

ಭಾರತ ಗ್ರೀನ್‌ 440&26/2
ಭಾರತ ರೆಡ್‌ 401/10 
(4ನೇ ದಿನದ ಚಹಾ ವಿರಾಮದ ವೇಳೆಗೆ)