Asianet Suvarna News Asianet Suvarna News

310 ರನ್ ಬೃಹತ್ ಮೊತ್ತ ಪೇರಿಸಿದ ಭಾರತ: ರಹಾನೆ,ಕೊಹ್ಲಿ, ಧವನ್ ಭರ್ಜರಿ ಆಟ

ಕಣಕ್ಕಿಳಿದ ಕೊಹ್ಲಿ ಪಡೆಯ ಆರಂಭಿಕ ಆಟಗಾರರಾದ ರಹಾನೆ ಮತ್ತು ಧವನ್ ಪ್ರಾರಂಭದಿಂದಲೇ ಬ್ಯಾಟ್'ಬೀಸಲು ಶುರು ಮಾಡಿದರು. ಕೆರೆಬಿಯನ್ ಪಡೆಯ ಎಲ್ಲ ಬೌಲರ್'ಗಳನ್ನು ದಂಡಿಸಲು ಶುರು ಮಾಡಿದರು. ಇವರಿಬ್ಬರು ಮೊದಲ ವಿಕೇಟ್ ನಷ್ಟಕ್ಕೆ 18.2 ಓವರ್'ಗಳಲ್ಲಿ 114 ರನ್ ಕಲೆ ಹಾಕಿದರು. ಕೆಟ್ಟ ಹೊಡೆತಕ್ಕೆ ಸಿಲುಕಿದ ಶಿಖರ್ ಧವನ್ 63(59 ಎಸೆತ: 10 ಬೌಂಡರಿ) ರನ್ ಗಳಿಸಿದ್ದಾಗ  ನರ್ಸ್ ಬೌಲಿಂಗ್'ನಲ್ಲಿ ಸ್ಟಂಪ್ ಆದರು.

India post challenging 311 run target against West Indies
  • Facebook
  • Twitter
  • Whatsapp

ಪೋರ್ಟ್ ಆಫ್ ಸ್ಪೇನ್(ಜೂ.26): ರಹಾನೆ ಆಕರ್ಷಕ ಶತಕ, ಕೊಹ್ಲಿ ಹಾಗೂ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 43 ಓವರ್'ಗಳಲ್ಲಿ  5/310 ರನ್ ಬೃಹತ್ ಮೊತ್ತ ದಾಖಲಿಸಿದೆ.

ಇಲ್ಲಿನ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಮಳೆಯ ಕಾರಣದಿಂದ ಆಟ 2 ಗಂಟೆ ತಡವಾಗಿ ಆರಂಭವಾಗಿ 50 ಓವರ್'ಗಳಿದ್ದ ಆಟವನ್ನು 43 ಕ್ಕೆ ಇಲೀಸಲಾಯಿತು. ಟಾಸ್ ಗೆದ್ದ ವಿಂಡೀಸ್'ನ ನಾಯಕ ಜೇಸನ್ ಹೋಲ್ಡರ್ ಭಾರತ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು.

ಕಣಕ್ಕಿಳಿದ ಕೊಹ್ಲಿ ಪಡೆಯ ಆರಂಭಿಕ ಆಟಗಾರರಾದ ರಹಾನೆ ಮತ್ತು ಧವನ್ ಪ್ರಾರಂಭದಿಂದಲೇ ಬ್ಯಾಟ್'ಬೀಸಲು ಶುರು ಮಾಡಿದರು. ಕೆರೆಬಿಯನ್ ಪಡೆಯ ಎಲ್ಲ ಬೌಲರ್'ಗಳನ್ನು ದಂಡಿಸಲು ಶುರು ಮಾಡಿದರು. ಇವರಿಬ್ಬರು ಮೊದಲ ವಿಕೇಟ್ ನಷ್ಟಕ್ಕೆ 18.2 ಓವರ್'ಗಳಲ್ಲಿ 114 ರನ್ ಕಲೆ ಹಾಕಿದರು. ಕೆಟ್ಟ ಹೊಡೆತಕ್ಕೆ ಸಿಲುಕಿದ ಶಿಖರ್ ಧವನ್ 63(59 ಎಸೆತ: 10 ಬೌಂಡರಿ) ರನ್ ಗಳಿಸಿದ್ದಾಗ  ನರ್ಸ್ ಬೌಲಿಂಗ್'ನಲ್ಲಿ ಸ್ಟಂಪ್ ಆದರು.

ಭರ್ಜರಿ ಆಟವಾಡಿದ ಕೊಹ್ಲಿ

ನಂತರ ಕ್ರೀಸ್'ಗೆ ಬಂದ ನಾಯಕ ವಿರಾಟ್ ಕೋಹ್ಲಿ ರಹಾನೆಗೆ ಜೊತೆಯಾಗಿ ಸ್ಫೋಟಕ ಆಟವಾಡಲು ಶುರು ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ ಭಾರತ 34 ಓವರ್'ಗಳಲ್ಲಿ 211 ಉತ್ತಮ ಮೊತ್ತ ಗಳಿಸಿದ್ದಾಗ ರಹಾನೆ ಶತಕ ಗಳಿಸಿದ ನಂತರ ಕಮ್ಮಿನ್ಸ್'ಗೆ ವಿಕೇಟ್ ಒಪ್ಪಿಸಿದರು. ಅಜಿಂಕ್ಯರ ತಮ್ಮ ಏ ವೃತ್ತಿ ಜೀವನದ 18ನೇ ಶತಕದಲ್ಲಿ  10 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ'ರ್'ಗಳಿದ್ದವು.

ನಂತರ ಬಂದ ಪಾಂಡ್ಯ, ಯುವರಾಜ್ ಹಾಗೂ ಧೋನಿ ಕೊಹ್ಲಿಗೆ ಜೊತೆಯಾಗಲಿಲ್ಲ. ಆದರೂ ತಾವೊಬ್ಬರೆ ಭರ್ಜರಿ ಆಟವಾಡಿ 66 ಎಸತಗಳಲ್ಲಿ  4 ಬೌಂಡರಿ, 4 ಸಿಕ್ಸ್'ರ್'ಗಳೊಂದಿಗೆ  87 ರನ್ ಚಚ್ಚಿದರು. ಅಂತಿಮವಾಗಿ ಭಾರತ ತಂಡ 43 ಓವರ್'ಗಳಲ್ಲಿ  5 ವಿಕೇಟ್ ನಷ್ಟಕ್ಕೆ 310 ರನ್ ರನ್ ಕಲೆ ಹಾಕಿತು.

ವಿಂಡೀಸ್ ಪರ ಜೋಸೆಫ್ 2/73, ಹೋಲ್ಡ'ರ್, ನರ್ಸ್ ಹಾಗೂ ಕಮ್ಮಿನ್ಸ್ ತಲಾ 1 ವಿಕೇಟ್ ಕಿತ್ತರು. 311 ರನ್'ಗಳ ರನ್ ಬೆನ್ನಟ್ಟಿದ ಹೋಲ್ಡರ್ ಪಡೆ ನಿಧಾನಗತಿಯ ಆಟ ಆರಂಭಿಸಿ 5 ಓವರ್'ಗಳಲ್ಲಿ  2 ವಿಕೇಟ್ ನಷ್ಟಕ್ಕೆ 6 ರನ್ ಗಳಿಸಿತ್ತು.

ಸ್ಕೋರ್

ಭಾರತ: 43 ಓವರ್'ಗಳಲ್ಲಿ 310/5(ರಹಾನೆ:103,ಧವನ್:63, ಕೊಹ್ಲಿ:87)

ವಿಂಡೀಸ್: 5 ಓವರ್'ಗಳಲ್ಲಿ 6/2

(ವಿವರ ಅಪೂರ್ಣ)

Follow Us:
Download App:
  • android
  • ios