ಚೊಚ್ಚಲ ಬಾರಿಗೆ ಅಂಡರ್-17 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಇಂದು ಭಾರತದ ಯುವ ಪಡೆಯು ಜವಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಯುಎಸ್ಎ ತಂಡದ ವಿರುದ್ಧ ಸೆಣಸಲಿದೆ.

ನವದೆಹಲಿ(ಅ.06): ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚೊಚ್ಚಲ ಪಂದ್ಯ ಉದ್ಘಾಟನೆಗೂ ಮುನ್ನ ಭಾರತ ತಂಡದ ಆಟಗಾರರು ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಎಫ್‌ಎಫ್‌ಐ), ಆಟಗಾರರು ತಂಗಿದ್ದ ಹೋಟೆಲ್‌'ನಲ್ಲಿ ಪೋಷಕರು ಮಕ್ಕಳನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಿತ್ತು. ತಮ್ಮ ಮಕ್ಕಳನ್ನು ನೋಡಿ ಪೋಷಕರು ಭಾವುಕರಾದರು. ಆಟಗಾರರು ಸಹ ಸಂತಸಗೊಂಡರು.

ಭಾರತ ತಂಡದ ಆಟಗಾರರ ಪೋಷಕರಿಗೆ ಭಾರತದ ಪಂದ್ಯಗಳನ್ನು ಉಚಿತವಾಗಿ ನೋಡುವ ವ್ಯವಸ್ಥೆಯನ್ನು ಎಎಫ್‌ಎಫ್‌ಐ ಕಲ್ಪಿಸಿದೆ.

ಚೊಚ್ಚಲ ಬಾರಿಗೆ ಅಂಡರ್-17 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಇಂದು ಭಾರತದ ಯುವ ಪಡೆಯು ಜವಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಯುಎಸ್ಎ ತಂಡದ ವಿರುದ್ಧ ಸೆಣಸಲಿದೆ.