Asianet Suvarna News Asianet Suvarna News

ಒಂದೇ ತಿಂಗಳಲ್ಲಿ 5ನೇ ಬಾರಿ ಇಂಡೋ ಪಾಕ್ ಮುಖಾಮುಖಿ: ಪುರುಷರ ಕೈಲಾಗದ್ದು ಮಹಿಳೆಯರು ಸಾಧಿಸುತ್ತಾರಾ?

ರಾಜತಾಂತ್ರಿಕ ವಿಚಾರವಾಗಿಲಿ ಅಥವಾ ಪಂದ್ಯದ ವಿಚಾರವಾಗಿರಲಿ ಭಾರತ ಪಾಕಿಸ್ತಾನದ ನಡುವೆಯಾದರೆ ಈ ಜಿದ್ದಾಜಿದ್ದಿ ವಿಶಿಷ್ಟ ಸ್ವರೂಪ ಪಡೆದುಕೊಳ್ಳುತ್ತದೆ. ಇದೇ ಕಾರಣದಿಂದ ಇಡೀ ವಿಶ್ವದ ಗಮನ ಈ ಎರಡು ದೇಶಗಳ ಮೇಲಿರುತ್ತದೆ. ಪಂದ್ಯದಲ್ಲಿ ವಿಶೇಷವಾಗಿ ಕ್ರಿಕೆಟ್ ವಿಚಾರ ತೆಗೆದುಕೊಂಡರೆ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುವ ಸ್ಪರ್ಧೆಗಿಂತ ಅಧಿಕ ರೋಮಾಂಚನಕಾರಿ ವಿಚಾರ ಮತ್ತೊಂದಿಲ್ಲ. ಜೂನ್'ನಲ್ಲೇ ನಾವು ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿರುವುದನ್ನು ನೋಡಿದ್ದೇವೆ. ಇನ್ನು ಈ ಪಂದ್ಯಕ್ಕೆ ಆಗಮಿಸಿದ ಪ್ರೇಕ್ಷಕರ ಸಂಖ್ಯೆ ಈವರೆಗಿನ ಈ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿತ್ತು. ಇದೀಗ ಮತ್ತೆ ಕ್ರಿಕೆಟ್ ಮೈದಾನದಲ್ಲೇ ಎರಡೂ ತಂಡಗಳು ಮತ್ತೆ ರದುರು ಬದುರಾಗಲಿವೆ, ಅದು ಕೂಡಾ ICC ಯ ಅತಿ ದೊಡ್ಡ ಟೂರ್ನಮೆಂಟ್'ನಲ್ಲಿ. ಆದರೆ ಇಲ್ಲಿರುವ ವ್ಯತ್ಯಾಸವೆಂದರೆ ಈ ಬಾರಿ ಎರಡೂ ದೇಶದ ಪುರುಷರಲ್ಲ ಬದಲಾಗಿ ಮಹಿಳಾ ಕ್ರಿಕೆಟ್ ತಂಡಗಳು ಆಡಲಿವೆ. ಇಂಗ್ಲೆಂಡ್'ನಲ್ಲಿ ನಡೆಯಲಿರುವ ವಿಶ್ವಕಪ್'ನಲ್ಲಿ ಮುಖಾಮುಖಿಯಾಗಲಿವೆ.

india pakistan to clash on cricket field again on july 2

ಟೀಂ ಇಂಡಿಯಾ ಹಾಗೂ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಈ ಜಿದ್ದಾಜಿದ್ದಿ ಜುಲೈ 2ರಂದು ಭಾರತೀಯ ಸಮಯಾನುಸಾರ ಮಧ್ಯಾಹ್ನ 3 ಗಂಟೆಗೆ ಡರ್ಬಿಯ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಸದ್ಯ ಟೀಂ ಇಂಡಿಯಾದ ಚಿತ್ತ ಕೆಲ ದಿನಗಳ ಹಿಂದಷ್ಟೇ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪುರುಷ ವಿಭಾಗಕ್ಕೆ ಪಾಕ್ ವಿರುದ್ಧ ಸಿಕ್ಕ ಸೋಲಿನ ಸೇಡು ತೀರಿಸುವ ಮೇಲೂ ಇದೆ. ಹೀಗಿರುವಾಗ ಮತ್ತೊಂದು ಬಾರಿ ಕೋಟ್ಯಾನುಗಟ್ಟಲೆ ಭಾರತೀಯ ಅಭಿಮಾನಿಗಳು ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥನೆ ಮಾಡಲಿದ್ದಾರೆ.

ಟೀಂ ಇಂಡಿಯಾದ ವಿರುದ್ಧ ಗೆದ್ದಿಲ್ಲ ಪಾಕಿಸ್ತಾನ

ಮಹಿಳಾ ಕ್ರಿಕೆಟ್'ನಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾದ ವಿರುದ್ಧ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಟೀಂ ಇಂಡಿಯಾ ಹಾಗೂ ಪಾಕ್ ತಂಡದ ನಡುವೆ 2005 ರಿಂದ 2017ರ ನಡುವೆ ಒಟ್ಟು 9 ಏಕದಿನ ಪಂದ್ಯಗಳು ನಡೆದಿದ್ದು, ಈ ಎಲ್ಲಾ ಪಂದ್ಯಗಳಲ್ಲೂ ಪಾಕ್ ಸೋಲನುಭವಿಸಿದೆ. ಇನ್ನು ಪುರುಷ ವಿಭಾಗದಲ್ಲಿ ಒಟ್ಟಾರೆ ದಾಖಲೆಗಳಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾಗಿಂತಲೂ ಮುಂದಿದ್ದರೂ, ICC ಟೂರ್ನಮೆಂಟ್'ಗಳಲ್ಲಿ ವಿಶೇಷವಾಗಿ ಏಕದಿನ ಹಾಗೂ ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ಟೀಂ ಇಂಡಿಯಾದ ವಿರುದ್ಧ ಯಾವತ್ತೂ ಗೆದ್ದಿಲ್ಲ.

Follow Us:
Download App:
  • android
  • ios