ಶ್ರೀಲಂಕಾ ತಂಡವನ್ನು 0-3 ರಿಂದ ವೈಟ್‌'ವಾಶ್ ಮಾಡಿದ ಭಾರತ ತಂಡ 125 ಅಂಕಗಳಿಸಿದೆ.

ದುಬೈ(ಸೆ.07): ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್'ಸ್ವೀಪ್ ಮಾಡಿದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಬಾಂಗ್ಲಾದೇಶದ ಎದುರು ಮೊದಲ ಟೆಸ್ಟ್‌'ನಲ್ಲಿ ಸೋಲುಂಡಿದ್ದ ಆಸ್ಟ್ರೇಲಿಯಾ ಶ್ರೇಯಾಂಕದಲ್ಲಿ 1 ಸ್ಥಾನ ಕುಸಿತ ಕಂಡಿದ್ದು, 5ನೇ ಸ್ಥಾನ ಪಡೆದಿದೆ.

ಶ್ರೀಲಂಕಾ ತಂಡವನ್ನು 0-3 ರಿಂದ ವೈಟ್‌'ವಾಶ್ ಮಾಡಿದ ಭಾರತ ತಂಡ 125 ಅಂಕಗಳಿಸಿದೆ. ಆಸ್ಟ್ರೇಲಿಯಾ 97 ಅಂಕಗಳಿಸಿದರೆ, ನ್ಯೂಜಿಲೆಂಡ್ ಕೂಡ ಅಷ್ಟೇ ಅಂಕಗಳಿಸಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ 100 ಅಂಕಗಳೊಂದಿಗೆ 4ನೇ ಶ್ರೇಯಾಂಕದಲ್ಲಿತ್ತು. ಇದೀಗ ಸರಣಿ 1-1 ರಿಂದ ಸಮಬಲ ಸಾಧಿಸಿದ್ದರ ಪರಿಣಾಮವಾಗಿ ಆಸೀಸ್ 1 ಸ್ಥಾನ ಕುಸಿದಿದೆ.

ಇನ್ನು ದಕ್ಷಿಣ ಆಫ್ರಿಕಾ 110 ಅಂಕಗಳಿಂದ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 105 ಅಂಕಗಳಿಂದ 3ನೇ ಸ್ಥಾನದಲ್ಲಿದೆ.