Asianet Suvarna News Asianet Suvarna News

ಕಿಂಗ್ ಕೋಹ್ಲಿ 33ನೇ ಶತಕ : ಟೆಸ್ಟ್, ಒನ್’ಡೇ ಎರಡರಲ್ಲೂ ಭಾರತ ನಂ.1

 ಆಫ್ರಿಕಾವನ್ನು ಮೊದಲ ಪಂದ್ಯದಲ್ಲಿ ಸೋಲಿಸುವ ಮೂಲಕ, ಐಸಿಸಿ ಏಕದಿನ ತಂಡಗಳ ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನಕ್ಕೇರಿದೆ. ಸರಣಿಯನ್ನು 4-2 ಅಂತರದಲ್ಲಿ ಗೆದ್ದರೆ ಭಾರತ ನಂ.1 ಸ್ಥಾನದಲ್ಲೇ ಉಳಿಯಲಿದೆ. ಟೆಸ್ಟ್ ರ್ಯಾಂಕಿಂಗ್‌ನಲ್ಲೂ ನಂ.1 ಸ್ಥಾನದಲ್ಲಿರುವ ಭಾರತ, ಟಿ20ಯಲ್ಲಿ 3ನೇ ಸ್ಥಾನ ಹೊಂದಿದೆ.

India No 1 In One Day and Test Match

ಬೆಂಗಳೂರು: ಆಫ್ರಿಕಾವನ್ನು ಮೊದಲ ಪಂದ್ಯದಲ್ಲಿ ಸೋಲಿಸುವ ಮೂಲಕ, ಐಸಿಸಿ ಏಕದಿನ ತಂಡಗಳ ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನಕ್ಕೇರಿದೆ. ಸರಣಿಯನ್ನು 4-2 ಅಂತರದಲ್ಲಿ ಗೆದ್ದರೆ ಭಾರತ ನಂ.1 ಸ್ಥಾನದಲ್ಲೇ ಉಳಿಯಲಿದೆ. ಟೆಸ್ಟ್ ರ್ಯಾಂಕಿಂಗ್‌ನಲ್ಲೂ ನಂ.1 ಸ್ಥಾನದಲ್ಲಿರುವ ಭಾರತ, ಟಿ20ಯಲ್ಲಿ 3ನೇ ಸ್ಥಾನ ಹೊಂದಿದೆ.

ಆಡಿದ ದೇಶದಲ್ಲೆಲ್ಲಾ ವಿರಾಟ್ ಶತಕ!

ವಿರಾಟ್ ಕೊಹ್ಲಿ ಇದುವರೆಗೂ ತಾವಾಡಿರುವ ದೇಶದಲೆಲ್ಲಾ ಏಕದಿನ ಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇದು ಅವರ ಮೊದಲ ಶತಕ. ಭಾರತದಲ್ಲಿ 14 ಶತಕ ಬಾರಿಸಿರುವ ಕೊಹ್ಲಿ, ಬಾಂಗ್ಲಾದಲ್ಲಿ 5, ಆಸ್ಟ್ರೇಲಿಯಾದಲ್ಲಿ 4, ಶ್ರೀಲಂಕಾದಲ್ಲಿ 4, ವೆಸ್ಟ್‌ಇಂಡೀಸ್‌ನಲ್ಲಿ 2, ಇಂಗ್ಲೆಂಡ್, ನ್ಯೂಜಿಲೆಂಡ್, ಜಿಂಬಾಬ್ವೆ ಹಾಗೂ ದ.ಆಫ್ರಿಕಾದಲ್ಲಿ ತಲಾ ಒಂದೊಂದು ಶತಕ ಬಾರಿಸಿದ್ದಾರೆ. ಪಾಕಿಸ್ತಾನದಲ್ಲಿ ಕೊಹ್ಲಿ ಒಂದೂ ಪಂದ್ಯವನ್ನು ಆಡಿಲ್ಲ.

ಸಚಿನ್ ಹಿಂದಿಕ್ಕಲು ಕೊಹ್ಲಿಗೆ ಬೇಕು 17 ಶತಕ!

ವಿರಾಟ್, ಸಚಿನ್‌ರ ಶತಕಗಳ ದಾಖಲೆಯನ್ನು ಮುರಿಯುತ್ತಾರಾ ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಸದ್ಯದ ಮಟ್ಟಿಗೆ ಕೊಹ್ಲಿ ಮುಂದಿನ 2-3 ವರ್ಷಗಳಲ್ಲಿ ಸಚಿನ್‌ರ 49 ಏಕದಿನ ಶತಕಗಳ ದಾಖಲೆಯನ್ನು ವಿರಾಟ್ ಮುರಿಯುವ ನಿರೀಕ್ಷೆ ಇದೆ. ಕೇವಲ 203 ಪಂದ್ಯಗಳಲ್ಲಿ 33 ಶತಕ ಬಾರಿಸಿರುವ ವಿರಾಟ್‌ಗೆ ಸಚಿನ್ ದಾಖಲೆ ಮುರಿಯಲು ಇನ್ನು 17 ಶತಕ ಮಾತ್ರ ಬೇಕಿದೆ. ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ಕೊಹ್ಲಿ ಈಗಾಗಲೇ 2ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಜಯದೋಟಕ್ಕೆ ಬ್ರೇಕ್!

2016ರ ಜನವರಿಯಿಂದ ತವರಿನಲ್ಲಿ ಸತತ 17 ಏಕದಿನ ಪಂದ್ಯಗಳನ್ನು ಗೆದ್ದು ಬೀಗಿದ್ದ ದಕ್ಷಿಣ ಆಫ್ರಿಕಾದ ಓಟಕ್ಕೆ ತಡೆ ಬಿದ್ದಿದೆ. ತವರಿನಲ್ಲಿ ನಡೆದ ಕೊನೆ 3 ಏಕದಿನ ಸರಣಿಗಳನ್ನು ಆಫ್ರಿಕಾ ಕ್ಲೀನ್ ಸ್ವೀಪ್ ಮಾಡಿತ್ತು. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5-0, 2017ರಲ್ಲಿ ಶ್ರೀಲಂಕಾ ವಿರುದ್ಧ 5-,2017ರಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದು ದಾಖಲೆ ಬರೆದಿತ್ತು. ಇದೀಗ ಭಾರತ ವಿರುದ್ಧ 6 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನೇ ಸೋಲುವುದರೊಂದಿಗೆ, ಆಫ್ರಿಕಾದ ಸತತ 4 ಸರಣಿಗಳ ಕ್ಲೀನ್ ಸ್ವೀಪ್ ಕನಸು ಭಗ್ನಗೊಂಡಿದೆ.

Follow Us:
Download App:
  • android
  • ios