ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ರ‍್ಯಾಂಕಿಂಗ್ ದೃಷ್ಟಿಯಿಂದಲೂ ಪ್ರಮುಖವಾಗಿದೆ. ಸರಣಿ ಗೆಲವಿನ ಜೊತೆಗೆ ಟೀಂ ಇಂಡಿಯಾ ಏಕದಿನದಲ್ಲಿ ಅಗ್ರಸ್ಥಾನ ಸಂಪಾದಿಸಲು ತಂಡ ಹೋರಾಟ ನಡೆಸಲಿದೆ. ಹಾಗಾದರೆ ಮೊದಲ ಸ್ಥಾನಕ್ಕೇರಲು ಭಾರತ ಯಾವ ರೀತಿಯ ಪ್ರದರ್ಶನ ನೀಡಬೇಕು? ಇಲ್ಲಿದೆ ವಿವರ.

ಲಂಡನ್(ಜು.10): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಹೀಗಾಗಿ ಆಂಗ್ಲರಿಗೆ ರ‍್ಯಾಂಕ್ ಉಳಿಸಿಕೊಳ್ಳೋ ಚಿಂತೆಯಾಗಿದ್ದರೆ, ಭಾರತಕ್ಕೆ ಅಗ್ರಸ್ಥಾನಕ್ಕೇರೋ ತವಕ.

ಭಾರತ ಹಾಗೂ ಇಂಗ್ಲೆಂಡ್ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಮೂರು ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದರೆ, ಕೊಹ್ಲಿ ಸೈನ್ಯ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲಿದೆ.

ಸದ್ಯ ಅಗ್ರಸ್ಥಾನ ಕಾಪಾಡಿಕೊಳ್ಳಲು ಇಂಗ್ಲೆಂಡ್ ತಯಾರಿ ನಡೆಸಿದೆ. ಭಾರತ ಹಾಗೂ ಇಂಗ್ಲೆಂಡ್ ಜೊತೆಗೆ, ಪಾಕಿಸ್ತಾನ, ಆಸ್ಟ್ರೇಲಿಯಾ, ಸೌತ್ಆಫ್ರಿಕಾ ತಂಡಗಳು ರ‍್ಯಾಂಕಿಂಗ್ ಉತ್ತಮ ಪಡಿಸಿಕೊಳ್ಳಲು ಹೋರಾಟ ನಡೆಸಲಿದೆ. ಹೀಗಾಗಿ ಈ ತಂಡಗಳ ಹೋರಾಟ ಕುತೂಹಲ ಮೂಡಿಸಿದೆ

ಇತ್ತೀಚೆಗಿನ ಐಸಿಸಿ ಏಕದಿನ ರ‍್ಯಾಂಕಿಂಗ್: