Asianet Suvarna News Asianet Suvarna News

ಹಾಕಿ: ಜರ್ಮನಿ ವಿರುದ್ಧ ಭಾರತಕ್ಕೆ ಸೋಲು

ಜರ್ಮನಿ ಈ ಟೂರ್ನಿಯಲ್ಲಿ 2 ಗೆಲುವು ಮತ್ತು 1 ಡ್ರಾವೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ. ಬೆಲ್ಜಿಯಂ 2 ಗೆಲುವು ಮತ್ತು 2 ಸೋಲು ಕಂಡಿದ್ದು, 2ನೇ ಸ್ಥಾನ ಪಡೆದಿದೆ.

india lost to germany in invitational hockey tournament

ಡುಸೆಲ್‌'ಡಾಫ್‌, ಜರ್ಮನಿ: ಮೂರು ರಾಷ್ಟ್ರಗಳ ಆಹ್ವಾನ ಹಾಕಿ ಟೂರ್ನಿಯನ್ನು ಭಾರತ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಆತಿಥೇಯ ಜರ್ಮನಿ ವಿರುದ್ಧ ಭಾರತ 0-2 ಗೋಲುಗಳಿಂದ ಸೋಲನುಭವಿಸಿದೆ. ಜರ್ಮನಿ ಪರ ಥೈಸ್‌ ಒಲೆ ಫ್ರಿನ್‌ಜ್ 7ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, ಟಿಮ್‌ ಹೆರ್ಜ್'ಬ್ರಚ್‌ 60ನೇ ನಿಮಿಷದಲ್ಲಿ 2ನೇ ಗೋಲುಗಳಿಸಿದರು.

ಬೆಲ್ಜಿಯಂ ಒಳಗೊಂಡಂತೆ 3 ರಾಷ್ಟ್ರಗಳ ಈ ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳಲ್ಲಿ ಭಾರತಕ್ಕೆ ಇದು 2ನೇ ಸೋಲಾಗಿದೆ. ಜರ್ಮನಿ ವಿರುದ್ಧ ನಡೆದ ಮೊದಲ ಸುತ್ತಿನಲ್ಲಿ ಭಾರತ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿತ್ತು. ಇನ್ನು, ಬೆಲ್ಜಿಯಂ ವಿರುದ್ಧ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದ ಭಾರತ ಎರಡನೇ ಸುತ್ತಿನಲ್ಲಿ ತಂಡದ ಮೇಲೆ ಜಯಭೇರಿ ಭಾರಿಸಿತ್ತು.

ಜರ್ಮನಿ ಈ ಟೂರ್ನಿಯಲ್ಲಿ 2 ಗೆಲುವು ಮತ್ತು 1 ಡ್ರಾವೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ. ಬೆಲ್ಜಿಯಂ 2 ಗೆಲುವು ಮತ್ತು 2 ಸೋಲು ಕಂಡಿದ್ದು, 2ನೇ ಸ್ಥಾನ ಪಡೆದಿದೆ.

ಅಂಕಪಟ್ಟಿ:
ಜರ್ಮನಿ: 7
ಬೆಲ್ಜಿಯಂ: 6
ಭಾರತ: 4

Follow Us:
Download App:
  • android
  • ios