ಇನ್ನು ಭಾರತ ಎದುರು ಸರಣಿ ಸೋತ ವೆಸ್ಟ್ ಇಂಡಿಸ್ 2019ರ ವಿಶ್ವಕಪ್'ಗೆ ಪಾಲ್ಗೊಳ್ಳುವ ಸಾಧ್ಯತೆ ಮತ್ತಷ್ಟು ಕ್ಷೀಣಿಸುತ್ತಿದೆ. ಪ್ರಸ್ತುತ ವೆಸ್ಟ್ ಇಂಡಿಸ್ ತಂಡ 9ನೇ ಶ್ರೇಯಾಂಕದಲ್ಲಿದೆ.
ದುಬೈ(ಜು.07): ಭಾರತ- ವೆಸ್ಟ್ ಇಂಡಿಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟವಾಗಿದ್ದು, ಟೀಂ ಇಂಡಿಯಾ ಎರಡು ಅಂಕ ಕಳೆದುಕೊಂಡರೂ(114) ಮೂರನೇ ಸ್ಥಾನದಲ್ಲೇ ಭದ್ರವಾಗಿದೆ. ದಕ್ಷಿಣ ಆಫ್ರಿಕಾ(119) ಮತ್ತು ಆಸ್ಟ್ರೇಲಿಯಾ(117) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.
ವಿಂಡೀಸ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು. ಈ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು, ನಾಲ್ಕನೇ ಏಕದಿನ ಪಂದ್ಯ ಸೋತಿದ್ದರಿಂದ ಕೊಹ್ಲಿ ಪಡೆಯಿಂದ ಎರಡು ಅಂಕ ಕೈತಪ್ಪಿದೆ.
ಇನ್ನು ಭಾರತ ಎದುರು ಸರಣಿ ಸೋತ ವೆಸ್ಟ್ ಇಂಡಿಸ್ 2019ರ ವಿಶ್ವಕಪ್'ಗೆ ಪಾಲ್ಗೊಳ್ಳುವ ಸಾಧ್ಯತೆ ಮತ್ತಷ್ಟು ಕ್ಷೀಣಿಸುತ್ತಿದೆ. ಪ್ರಸ್ತುತ ವೆಸ್ಟ್ ಇಂಡಿಸ್ ತಂಡ 9ನೇ ಶ್ರೇಯಾಂಕದಲ್ಲಿದೆ.
ನೂತನ ಐಸಿಸಿ ಏಕದಿನ ಶ್ರೇಯಾಂಕ ಹೀಗಿದೆ:
ಕ್ರ.ಸಂ ತಂಡ ಅಂಕ
1. ದಕ್ಷಿಣ ಆಫ್ರಿಕಾ 119
2. ಆಸ್ಟ್ರೇಲಿಯಾ 117
3. ಭಾರತ 114
4. ಇಂಗ್ಲೆಂಡ್ 113
5. ನ್ಯೂಜಿಲ್ಯಾಂಡ್ 111
6. ಪಾಕಿಸ್ತಾನ 95
7. ಬಾಂಗ್ಲಾದೇಶ 94
8. ಶ್ರೀಲಂಕಾ 92
9. ವೆಸ್ಟ್ ಇಂಡಿಸ್ 78
10. ಆಫ್ಘಾನಿಸ್ತಾನ 54
