ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆಗೆ ಪಾಕಿಸ್ತಾನ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಸಮಸ್ತ ಭಾರತೀಯರಿಗೆ ಶುಭಾಶಯ ಕೋರಿದ ಪಾಕಿಸ್ತಾನ ಕ್ರಿಕೆಟಿಗರ ಟ್ವೀಟ್ ಇಲ್ಲಿದೆ.
ಲಾಹೋರ್(ಆ.15): ದೇಶಾದ್ಯಂತ ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಹಳ್ಳಿ ಹಳ್ಳಿಗಳಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸಾಮಾನ್ಯ ಜನರೂ ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೆ ದೇಶಪ್ರೇಮ ಮೆರೆದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಶಭಾಶಯ ಕೋರಿದ್ದಾರೆ. ಇಷ್ಟೇ ಅಲ್ಲ, ಭಾರತೀಯರಿಗೆ ಪಾಕಿಸ್ತಾನಿ ಕ್ರಿಕೆಟಿಗರೂ ಕೂಡ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಹೇಳಿದ್ದಾರೆ. ಇಷ್ಟೇ ಅಲ್ಲ. ಮುಂದಿನ ವರ್ಷಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಭಾಂಧವ್ಯ ಉತ್ತಮವಾಗಲಿ, ಈ ಮೂಲಕ ಕ್ರಿಕೆಟ್ ಸರಣಿ ಮತ್ತೆ ಆರಂಭಗೊಳ್ಳಲಿ ಎಂದಿದ್ದಾರೆ.
ಪಾಕಿಸ್ತಾನ ಮತ್ತೊರ್ವ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಕೂಡ ಸಮಸ್ತ ಭಾರತೀಯರು ಹಾಗೂ ಮನೆಯಲ್ಲಿರುವ ಪತ್ನಿ ಸಾನಿಯಾ ಮಿರ್ಜಾಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳಿದ್ದಾರೆ.
