ನವದೆಹಲಿ(ಅ.04): ವಿಶ್ವ ಕ್ರಿಕೆಟ್ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ, ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ನಂ.1 ಪಟ್ಟ ಪಡೆದಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಂಡ, ಮಿಸ್ಬಾ ಉಲ್ ಹಕ್ ಪಡೆಗಿಂತ ಉತ್ತಮವಾಗಿದೆ. ಆದರೂ ಪಾಕಿಸ್ತಾನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದು ಆಶ್ಚರ್ಯವಾಗಿತ್ತು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ, ಪಾಕಿಸ್ತಾನಕ್ಕಿಂತ ಪ್ರಭಾವಿಯಾಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2ರಿಂದ ಸಮಬಲ ಮಾಡಿಕೊಂಡ ಪಾಕಿಸ್ತಾನ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿತ್ತು.

ಶ್ರೇಯಾಂಕವನ್ನು ನಾನು ಪರಿಗಣಿಸುವುದಿಲ್ಲ. ಒಂದೊಮ್ಮೆ ಪರಿಗಣಿಸುವ ಅನಿವಾರ್ಯತೆ ಬಂದರೆ, ಭಾರತ ತಂಡ ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ಎದುರು ಸರಣಿ ಜಯಿಸಬೇಕು ಆಗ ಮಾತ್ರ ನಂ.1 ತಂಡ ಎಂದು ಹೇಳಬಹುದು ಎಂದು ಗಂಗೂಲಿ ತಿಳಿಸಿದರು.