ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ರದ್ದಾಗಿತ್ತು. ಆದರೆ ಟಿವಿ ಸಂಸ್ಥೆಯ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಆರಂಭಗೊಂಡಿತು.
ಮುಂಬೈ(ಸೆ.01): ಫ್ಲೋರಿಡಾದಲ್ಲಿ ನಡೆದ ಭಾರತ-ವಿಂಡೀಸ್ ಎರಡನೇ ಟಿ20 ಪಂದ್ಯ ರದ್ದಾಗಲು ಪಂದ್ಯದ ನೇರ ಪ್ರಸಾರದ ಗುತ್ತಿಗೆ ಪಡೆದಿದ್ದ ಟಿವಿ ಚಾನೆಲ್ ಕಾರಣವೆಂಬ ಆರೋಪ ಕೇಳಿಬಂದಿದೆ.
ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ರದ್ದಾಗಿತ್ತು. ಆದರೆ ಟಿವಿ ಸಂಸ್ಥೆಯ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಆರಂಭಗೊಂಡಿತು.
ನಂತರ ಮಳೆ ಬಂದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಸರಿಯಾಗಿ ಪ್ರಾರಂಭವಾಗಿದಿದ್ದರೆ ಆಗ ಭಾರತ ಕನಿಷ್ಠ 5 ಓವರ್ಗಳನ್ನು ಮುಗಿಸುತ್ತಿತ್ತು.
ಈ ವೇಳೆ ಡಕ್ ವರ್ತ್ ಲೂಯಿಸ್ ನಿಯಮದ ಅನ್ವಯ ಲೆಕ್ಕಾಚಾರ ಹಾಕಿ ಫಲಿತಾಂಶ ಕಂಡುಹಿಡಿಯಬಹುದಿತ್ತು. ಆದರೆ ಪಂದ್ಯ ಪ್ರಸಾರ ತಡವಾಗಿದ್ದರಿಂದ ಭಾರತದ ಸರಣಿ ಸೋಲಿಗೆ ಟಿವಿ ಚಾನೆಲ್ ಕಾರಣವಾಗಿದೆ.