Asian Para Games 2023: ಭಾರತಕ್ಕೆ ಐತಿಹಾಸಿಕ 111 ಪದಕ

29 ಚಿನ್ನ, 31 ಬೆಳ್ಳಿ, 51 ಕಂಚಿನ ಪದಕಗಳನ್ನು ಬಾಚಿಕೊಂಡ ಭಾರತದ ಪ್ಯಾರಾ ಅಥ್ಲೀಟ್‌ಗಳು, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದಿದ್ದ 107 ಪದಕಗಳ ದಾಖಲೆಯನ್ನು ಮುರಿದರು. ಪದಕ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಅಗ್ರ-5ರಲ್ಲಿ ಸ್ಥಾನ ಪಡೆಯಿತು. 214 ಚಿನ್ನ ಸೇರಿ ಬರೋಬ್ಬರಿ 521 ಪದಕ ಗೆದ್ದ ಚೀನಾ ಅಗ್ರಸ್ಥಾನಿಯಾಯಿತು.

India create history in Asian Para Games 2023 end campaign with record 111 medal haul kvn

ಹಾಂಗ್‌ಝೋ(ಅ.29): ಭಾರತದ ಪ್ಯಾರಾ ಅಥ್ಲೀಟ್‌ಗಳು 2022ರ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳೊಂದಿಗೆ ಇತಿಹಾಸ ಬರೆದಿದ್ದಾರೆ. ಇದು ಯಾವುದೇ ಅಂತಾರಾಷ್ಟ್ರೀಯ ಬಹು-ಕ್ರೀಡೆಯನ್ನೊಳಗೊಂಡ ಕೂಟದಲ್ಲಿ ಭಾರತದ ಗರಿಷ್ಠ ಪದಕ ಸಾಧನೆ ಎನಿಸಿದೆ.

29 ಚಿನ್ನ, 31 ಬೆಳ್ಳಿ, 51 ಕಂಚಿನ ಪದಕಗಳನ್ನು ಬಾಚಿಕೊಂಡ ಭಾರತದ ಪ್ಯಾರಾ ಅಥ್ಲೀಟ್‌ಗಳು, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದಿದ್ದ 107 ಪದಕಗಳ ದಾಖಲೆಯನ್ನು ಮುರಿದರು. ಪದಕ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಅಗ್ರ-5ರಲ್ಲಿ ಸ್ಥಾನ ಪಡೆಯಿತು. 214 ಚಿನ್ನ ಸೇರಿ ಬರೋಬ್ಬರಿ 521 ಪದಕ ಗೆದ್ದ ಚೀನಾ ಅಗ್ರಸ್ಥಾನಿಯಾಯಿತು.

ಏಷ್ಯಾಡ್‌ಗೂ ಮುನ್ನ ಭಾರತ ಒಂದೇ ಒಂದು ಬಾರಿ 100ಕ್ಕಿಂತ ಹೆಚ್ಚು ಪದಕ ಜಯಿಸಿತ್ತು. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 101 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತ್ತು. ಕೂಟದ ಕೊನೆಯ ದಿನವಾದ ಶನಿವಾರ ಭಾರತ ಮತ್ತೆ 4 ಚಿನ್ನ ಸೇರಿ 12 ಪದಕಗಳನ್ನು ಜಯಿಸಿತು. ಚೆಸ್‌ನಲ್ಲಿ 7 ಪದಕ ಬಂದರೆ, ಅಥ್ಲೆಟಿಕ್ಸ್‌ನಲ್ಲಿ 4 ಹಾಗೂ ರೋಯಿಂಗ್‌ನಲ್ಲಿ 1 ಪದಕ ದೊರೆಯಿತು.

ರೀತಿಕಾಗೆ ಅಂಡರ್‌-23 ವಿಶ್ವ ಚಾಂಪಿಯನ್‌ ಪಟ್ಟ! ಚಿನ್ನ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು

ಪುರುಷರ ಎಫ್‌55 ಜಾವೆಲಿನ್‌ ಥ್ರೋನಲ್ಲಿ ನೀರಜ್‌ ಯಾದವ್‌ 33.69 ಮೀ. ದೂರಕ್ಕೆ ಎಸೆದು ಕೂಟ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದ ಮೂಲಕ ದಿನದ ಮೊದಲ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ತೇಕ್‌ ಚಾಂದ್‌ ಕಂಚು ಪಡೆದರು. ಪುರುಷರ 400 ಮೀ. ಟಿ47 ವಿಭಾಗದಲ್ಲಿ ದಿಲೀಪ್‌ ಚಿನ್ನ ಗೆದ್ದರು. ಇನ್ನು ಚೆಸ್‌ನ ಪುರುಷರ ವೈಯಕ್ತಿಕ ರ್‍ಯಾಪಿಡ್‌ VI-ಬಿ1 ವಿಭಾಗದಲ್ಲಿ ಭಾರತ ಕ್ಲೀನ್‌ ಸ್ವೀಪ್‌ ಮಾಡಿತು. ಸತೀಶ್‌, ಪ್ರಧಾನ್‌, ಅಶ್ವಿನ್‌ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಗೆದ್ದರು. ಭಾರತ ಕ್ರೀಡಾಕೂಟಕ್ಕೆ ದಾಖಲೆಯ 313 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಭಾರತೀಯರು 22 ಸ್ಪರ್ಧೆಗಳ ಪೈಕಿ 17ರಲ್ಲಿ ಸ್ಪರ್ಧಿಸಿದ್ದರು.

ರಾಜ್ಯದ ಕಿಶನ್‌ಗೆ 2 ಕಂಚು

ಪುರುಷರ ವೈಯಕ್ತಿಕ ರ್‍ಯಾಪಿಡ್‌ VI-ಬಿ2/ಬಿ3 ವಿಭಾಗದಲ್ಲಿ ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಕರ್ನಾಟಕದ ಕಿಶನ್‌ ಗಂಗೊಳ್ಳಿ ಕಂಚಿನ ಪದಕ ಪಡೆದರು. ಕಿಶನ್‌, ಸೋಮೇಂದ್ರ ಹಾಗೂ ಆರ್ಯನ್‌ ತಂಡ ವಿಭಾಗದಲ್ಲಿ ಕಂಚಿನ ಪದಕ ಪಡೆದರು.

ಪದಕ ಪಟ್ಟಿ

ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು

ಚೀನಾ 214 167 140 521

ಇರಾನ್‌ 44 46 41 131

ಜಪಾನ್‌ 42 49 59 150

ಕೊರಿಯಾ 30 33 40 103

ಭಾರತ 29 31 51 111

ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ

ವರ್ಷ ಸ್ಥಾನ ಚಿನ್ನ ಬೆಳ್ಳಿ ಕಂಚು ಒಟ್ಟು

2010 15 01 04 09 14

2014 15 03 14 16 33

2018 09 15 24 33 72

2023 05 29 31 51 111

Latest Videos
Follow Us:
Download App:
  • android
  • ios