ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಈ ಬಗ್ಗೆ ಚರ್ಚೆ ನಡೆಯಲೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಇದು ಮಾನ್ಯವಾದರೆ, ಇದೇ ವರ್ಷಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆಗೆ ಡಿಆರ್‌ಎಸ್ ಅಳವಡಿಸಿಕೊಳ್ಳುವುದು ಸ್ಪಷ್ಟವಾಗಲಿದೆ.
ನವದೆಹಲಿ(ಅ.14): ವಿವಾದಾತ್ಮಕ ಎಂದೆನಿಸಿರುವ ಡಿಸಿಷನ್ ರಿವ್ಯೂ ಸಿಸ್ಟಂಗೆ (ಡಿಆರ್ಎಸ್) ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ), ಇದೇ ತಿಂಗಳ 16ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಆ ತಂತ್ರಜ್ಞಾನ ಅಳವಡಿಸುವ ಪ್ರಮೇಯದಿಂದ ಹಿಂದೆ ಸರಿದಿದೆ.
ಇತ್ತೀಚೆಗೆ, ಡಿಆರ್ಎಸ್ ವ್ಯವಸ್ಥೆಯು ಅವಲಂಬಿತವಾಗಿರುವ ‘ಹಾಕ್ ಐ’ ತಂತ್ರಜ್ಞಾನದ ಕುರಿತಂತೆ ಟೀಂ ಇಂಡಿಯಾಕ್ಕೆ ಅರುಹಲು ಕೆಲ ಪ್ರಯತ್ನಗಳು ನಡೆದಿದ್ದವು. ಆದರೆ, ಅನಿಲ್ ಕುಂಬ್ಳೆ ಮಾರ್ಗದರ್ಶನದ ಟೀಂ ಇಂಡಿಯಾ ಹಾಕ್ ಐ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲದಿರುವುದರಿಂದ ಇದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ.
ಆದರೆ, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಈ ಬಗ್ಗೆ ಚರ್ಚೆ ನಡೆಯಲೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಇದು ಮಾನ್ಯವಾದರೆ, ಇದೇ ವರ್ಷಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆಗೆ ಡಿಆರ್ಎಸ್ ಅಳವಡಿಸಿಕೊಳ್ಳುವುದು ಸ್ಪಷ್ಟವಾಗಲಿದೆ.
