Asianet Suvarna News Asianet Suvarna News

ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಚಾಂಪಿಯನ್

ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲೂ ಭಾರತದ ಚಾಂಪಿಯನ್ ಓಟ ಮುಂದುವರಿದಿದೆ. ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ಅಬ್ಬರಿಸಿದ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಈ ರೋಚಕ ಪಂದ್ಯದ ಹೈಲೈಟ್ ಇಲ್ಲಿದೆ.
 

India clinched the Kabaddi Masters Dubai 2018 title after beating Iran 44-26 in the final

ದುಬೈ(ಜೂ.30): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಕೀರಿಟಕ್ಕೆ ಮುತ್ತಿಕ್ಕಿದೆ. ಇರಾನ್ ವಿರುದ್ಧ  ನಡೆದ ಫೈನಲ್ ಪಂದ್ಯದಲ್ಲಿ ಭಾರತ 44-26 ಅಂತರದಲ್ಲಿ ಭರ್ಜರಿ ಗೆಲವು ದಾಖಲಿಸಿದೆ. 

ಮೊದಾಲಾರ್ಧದ ಆರಂಭದಲ್ಲೇ ಭಾರತ ಮುನ್ನಡೆ ಸಾಧಿಸಿತು. ಮೊದಲ ರೈಡ್‌ನಿಂದಲೇ ಅಂಕ ಕಬಳಿಸಲು ಆರಂಭಿಸಿದ ಭಾರತ 4-0 ಅಂತರದ ಮುನ್ನಡೆ ಸಾಧಿಸಿತು. ಟ್ಯಾಕಲ್‌ನಲ್ಲೂ ಭಾರತದ ಡಿಫೆಂಡರ್‌ಗಳು ಅದ್ಬುತ ಪ್ರದರ್ಶನ ನೀಡಿದರು. 

ಅಷ್ಟೇ ವೇಗದಲ್ಲಿ ಇರಾನ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಆದರೆ ಭಾರತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 18-11 ಅಂತರದಲ್ಲಿ ಮೇಲುಗೈ ಸಾಧಿಸಿತು.

ದ್ವಿತಿಯಾರ್ಧದಲ್ಲಿ ಭಾರತದ ಮೋನು ಗಯಾತ್ ರೈಡ್‌ನಿಂದ ಅಂಕ ಭೇಟೆ ಆರಂಭಿಸಿತು. ಆದರೆ ಇರಾನ್ ಡಿಫೆಂಡರ್‌ಗಳು ಮಿಂಚಿನ ಪ್ರದರ್ಶನ ನೀಡೋ ಮೂಲಕ ಭಾರತಕ್ಕೆ ಶಾಕ್ ನೀಡೋ ಪ್ರಯತ್ನ ಮಾಡಿತು. ಆದರೆ ಪ್ರಯೋಜನವಾಗಲಿಲ್ಲ.

ಅಜಯ್ ಠಾಕೂರ್, ಮೋನು ಗೋಯಾತ್ ಅದ್ಬುತ ರೈಡ್‌ ಹಾಗೂ ಡಿಫೆಂಡರ್‌ಗಳ ಸೂಪರ್ ಟ್ಯಾಕಲ್‌ನಿಂದ ಭಾರತ 44-26 ಅಂತರದಲ್ಲಿ ಇರಾನ್ ತಂಡವನ್ನ ಮಣಿಸಿತು. ಈ ಮೂಲಕ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

Follow Us:
Download App:
  • android
  • ios