ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ರೆಡ್ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಕಾನ್ಪುರ(ಸೆ.16): ಇಂಡಿಯಾ ರೆಡ್ ಹಾಗೂ ಇಂಡಿಯಾ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯದ ಕೊನೆ ದಿನವಾದ ಇಂದು ಎರಡೂ ತಂಡಗಳು ಸಮಬಲ ಪ್ರದರ್ಶಿಸಿದ ಕಾರಣ ಯಾವುದೇ ಫಲಿತಾಂಶ ಲಭ್ಯವಾಗಲಿಲ್ಲ.

ಮೂರನೇ ದಿನದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌'ನಲ್ಲಿ 3 ವಿಕೆಟ್ ನಷ್ಟಕ್ಕೆ 232 ರನ್ ಪೇರಿಸಿದ್ದ ಇಂಡಿಯಾ ಬ್ಲೂ, ಕೊನೆಯ ದಿನ ಹನುಮ ವಿಹಾರಿ ಹಾಗೂ ದೀಪಕ್ ಹೂಡಾರ ಶತಕದ ನೆರವಿನಿಂದ 444 ರನ್ ಗಳಿಸಿ, 61 ರನ್‌'ಗಳ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ರೆಡ್ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್:

ಇಂಡಿಯಾ ರೆಡ್ 383 ಮತ್ತು 135/5(ರಿಶಬ್ 46,ಇಂದ್ರಜಿತ್ 24),

ಇಂಡಿಯಾ ಬ್ಲೂ 444/10

(ದೀಪಕ್ 133, ಹನುಮ ವಿಹಾರಿ 105, ಕರ್ಣ್ 94/5)