ಭಾರತದ ಸ್ಪಿನ್ ಅಸ್ತ್ರಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಸೀಕ್ರೆಟ್ ಸ್ಪಿನ್ ಅಸ್ತ್ರ ಬಳಸಲು ರೆಡಿಯಾಗಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನಡೆ ಇಂಗ್ಲೆಂಡ್ ತಂಡ ತಮ್ಮ ಸೀಕ್ರೆಟ್ ಸ್ಪಿನ್ ಅಸ್ತ್ರದ ಕುರಿತು ಎಚ್ಚರಿಕೆ ನೀಡಿದೆ. ಹಾಗಾದರೆ ಇಂಗ್ಲೆಂಡ್ ತಂಡದ ಸೀಕ್ರೆಟ್ ಸ್ಪಿನ್ ಅಸ್ತ್ರ ಯಾವುದು? ಇಲ್ಲಿದೆ ವಿವರ.

ಲಂಡನ್(ಜು.24): ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಇಂಗ್ಲೆಡ್ ಎಚ್ಚರಿಕೆ ನೀಡಿದೆ. ಭಾರತದ ಕುಲದೀಪ್ ಯಾದವ್ ಅಸ್ತ್ರಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಸೀಕ್ರೆಟ್ ಸ್ಪಿನ್ ಅಸ್ತ್ರ ಪ್ರಯೋಗಿಸಲಿದೆ ಅನ್ನೋ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಕೌಂಟಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಯಾರ್ಕ್‌ಶೈರ್ ತಂಡದ ಪರ ಕಣಕ್ಕಿಳಿದ ಜೋ ರೂಟ್ ಅದ್ಬುತ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಲ್ಯಾನ್ಸಶೈರ್ ವಿರುದ್ಧದ ಪಂದ್ಯದಲ್ಲಿ ರೂಟ್, 5ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.

Scroll to load tweet…

ರೂಟ್ ಸ್ಪಿನ್ ಮೋಡಿಯಿಂದ ಯಾರ್ಕ್‌ಶೈರ್ ತಂಡ 118 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತಕ್ಕೆ ರೂಟ್ ಸ್ಪಿನ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಗೆ ಮುಕ್ತಾಯವಾದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ರೂಟ್ ಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ರೂಟ್ ಭಾರತದ ಕುಲದೀಪ್ ಯಾದವ್ ಹಾಗೂ ಸ್ಪಿನ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದರು.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಜೋ ರೂಟ್ ಟೀಂ ಇಂಡಿಯಾಗೆ ಸೋಲುಣಿಸಲು ರೆಡಿಯಾಗಿದ್ದಾರೆ. ಹೀಗಾಗಿ ಕೊಹ್ಲಿ ಸೈನ್ಯ ತಿರುಗೇಟು ನೀಡಲು ಕಠಿಣ ಅಭ್ಯಾಸದಲ್ಲಿ ತೊಡಗಿದೆ.