ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2-0 ಅಂತರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿದೆ.

ಕೊಲಂಬೋ(ಆ.06): ರವೀಂದ್ರ ಜಡೇಜಾ ಅವರ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಎರಡನೇ ಇನಿಂಗ್ಸ್'ನಲ್ಲಿ 386 ರನ್'ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಹಾಗೂ 53 ರನ್'ಗಳ ಅಂತರದ ಸೋಲು ಅನುಭವಿಸಿದೆ. ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿದೆ.

ಮೊದಲ ಇನಿಂಗ್ಸ್'ನಲ್ಲಿ 183ರನ್'ಗಳಿಗೆ ಆಲೌಟ್ ಆಗಿ ಫಾಲೋ ಆನ್ ಒತ್ತಡಕ್ಕೆ ಸಿಲುಕಿದ್ದರೂ, ಮೂರನೇ ದಿನದಾಟದ ಮುಕ್ತಾಯದ ವೇಳೆಗೆ 2 ವಿಕೆಟ್ ನಷ್ಟಕ್ಕೆ 209 ರನ್'ಗಳಿಸಿ ಉತ್ತಮ ಹೋರಾಟದ ಮುನ್ಸೂಚನೆ ನೀಡಿದ್ದ ಲಂಕಾಗೆ ಎಡಗೈ ಸ್ಪಿನ್ನರ್ ಜಡೇಜಾ ಮಾರಕವಾಗಿ ಪರಿಣಮಿಸಿದರು. 92 ರನ್'ಗಳಿಸಿದ್ದ ದಿಮುತ್ ಕರುಣಾರತ್ನೆ 141 ರನ್ ಬಾರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಹಾಗೂ ಕೆಳಕ್ರಮಾಂಕದಲ್ಲಿ ಲಂಕಾದ ಯಾವೊಬ್ಬ ಬ್ಯಾಟ್ಸ್'ಮನ್ ಕೂಡಾ ಕರುಣಾರತ್ನೆಗೆ ಸಾಥ್ ನೀಡಲಿಲ್ಲ. ರವೀಂದ್ರ ಜಡೇಜಾ ಲಂಕಾದ ಪ್ರಮುಖ 5 ವಿಕೆಟ್'ಗಳನ್ನು ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2-0 ಅಂತರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ : 622/9

ಶ್ರೀಲಂಕಾ ಮೊದಲ ಇನಿಂಗ್ಸ್ : 183/10

ಶ್ರೀಲಂಕಾ ಎರಡನೇ ಇನಿಂಗ್ಸ್ : 386/10

ಫಲಿತಾಂಶ : ಭಾರತಕ್ಕೆ ಇನಿಂಗ್ಸ್ ಹಾಗೂ 56 ರನ್'ಗಳ ಜಯ