ಭಾರತ ಮತ್ತು ನೆದರ್'ಲ್ಯಾಂಡ್ಸ್ ತಂಡಗಳು ಈಗಾಗಲೇ ಕ್ವಾರ್ಟರ್'ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿವೆ. ಜೂನ್ 22ರಂದು ಎಂಟರ ಹಂತದ ನಾಕೌಟ್ ಪಂದ್ಯಗಳು ನಡೆಯಲಿದೆ. ಜೂನ್ 24ರಂದು ಸೆಮಿಫೈನಲ್ ಮತ್ತು ಜೂನ್ 25ರಂದು ಫೈನಲ್ ಪಂದ್ಯ ನಡೆಯಲಿದೆ.

ಲಂಡನ್(ಜೂನ್ 18): ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಪಾಕ್ ವಿರುದ್ಧ ಪರದಾಡುತ್ತಿರುವ ಸಂದರ್ಭದಲ್ಲೇ ಅದೇ ಲಂಡನ್ ನಗರದಲ್ಲಿ ಭಾರತ ಹಾಕಿ ತಂಡವು ಪಾಕಿಸ್ತಾನವನ್ನು ಸದ್ದಿಲ್ಲದೇ ಬಗ್ಗು ಬಡಿದಿದೆ. ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ 7-1 ಗೋಲುಗಳಿಂದ ಪಾಕಿಸ್ತಾನಕ್ಕೆ ಸೋಲುಣಿಸಿದೆ.

Add Asianetnews Kannada as a Preferred SourcegooglePreferred

ಪಂದ್ಯದ ಆರಂಭದಲ್ಲಿ ಪಾಕಿಸ್ತಾನವೇ ತುಸು ಮೇಲುಗೈ ಸಾಧಿಸಿತಾದರೂ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್'ನಲ್ಲಿ ಹರ್ಮನ್'ಪ್ರೀತ್ ಸಿಂಗ್'ರ ಅದ್ಭುತ ಡ್ರ್ಯಾಗ್'ನಿಂದ ಮೊದಲ ಗೋಲು ಗಳಿಸಿದ ಭಾರತ ಅಲ್ಲಿಂದ ಹಿಂದಿರುಗಿ ನೋಡಲಿಲ್ಲ. ಹರ್ಮಾನ್'ಪ್ರೀತ್ 2, ತಲ್ವೀಂದರ್ ಸಿಂಗ್ 2, ಆಕಾಶ್'ದೀಪ್ ಸಿಂಗ್ 1, ಪರದೀಪ್ ಮೋರ್ 1 ಗೋಲು ಗಳಿಸಿದರು.

ಭಾರತ ಈ ಮೊದಲು ತನ್ನ ಗುಂಪಿನಲ್ಲಿ ಸ್ಕಾಟ್ಲೆಂಡ್ ಮತ್ತು ಕೆನಡಾ ತಂಡಗಳನ್ನು ಸೋಲಿಸಿತ್ತು. ಬಿ ಗುಂಪಿನಲ್ಲಿ ಟಾಪ್'ನಲ್ಲಿರುವ ಭಾರತ ತಂಡಕ್ಕೆ ಜೂನ್ 20ರಂದು ಪ್ರಬಲ ನೆದರ್'ಲೆಂಡ್ಸ್ ತಂಡದ ಸವಾಲು ಬಾಕಿ ಇದೆ.

ಭಾರತ ಮತ್ತು ನೆದರ್'ಲ್ಯಾಂಡ್ಸ್ ತಂಡಗಳು ಈಗಾಗಲೇ ಕ್ವಾರ್ಟರ್'ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿವೆ. ಜೂನ್ 22ರಂದು ಎಂಟರ ಹಂತದ ನಾಕೌಟ್ ಪಂದ್ಯಗಳು ನಡೆಯಲಿದೆ. ಜೂನ್ 24ರಂದು ಸೆಮಿಫೈನಲ್ ಮತ್ತು ಜೂನ್ 25ರಂದು ಫೈನಲ್ ಪಂದ್ಯ ನಡೆಯಲಿದೆ.