17ನೇ ನಿಮಿಷದಲ್ಲಿ ಚಿಂಗ್ಲೆನ್‌ಸಾನಾ ಸಿಂಗ್, 44 ಮತ್ತು 45 ನಿಮಿಷದಲ್ಲಿ ರಮಣ್‌ದೀಪ್ ಗೋಲು ಬಾರಿಸಿದರು.

ಢಾಕಾ(ಅ.15): ಭಾರತ ತಂಡ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಗೋಲುಗಳ ಜಯ ಸಾಧಿಸಿದೆ.

ಸತತ ಮೂರು ಗೆಲುವಿನೊಂದಿಗೆ ಮನ್‌ಪ್ರೀತ್ ಸಿಂಗ್ ಪಡೆ ‘ಸೂಪರ್ 4’ ಹಂತ ಪ್ರವೇಶಿಸಿದೆ. ಈ ಮೊದಲು ಜಪಾನ್, ಬಾಂಗ್ಲಾದೇಶ ವಿರುದ್ಧ ಗೆಲುವು ಪಡೆದಿತ್ತು. 17ನೇ ನಿಮಿಷದಲ್ಲಿ ಚಿಂಗ್ಲೆನ್‌ಸಾನಾ ಸಿಂಗ್, 44 ನಿಮಿಷದಲ್ಲಿ ರಮಣ್‌ದೀಪ್ 45ನೇ ನಿಮಿಷದಲ್ಲಿ ಹರ್ಮನ್ ದೀಪ್ ಗೋಲು ಬಾರಿಸಿ ತಂಡವು 3-0 ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಪಾಕ್ ಪರ ಅಲಿ ಶಾನ್ 49ನೇ ನಿಮಿಷದಲ್ಲಿ ಗೋಲು ಹೊಡೆದು ಒಂಚೂರು ಆಶಾಭಾವನೆ ಮೂಡಿಸಿದರೂ ನಂತರದ ಸಮಯದಲ್ಲಿ ಗೋಲು ಬಾರಿಸಲು ವಿಫಲವಾಯಿತು.

3 ಪಂದ್ಯಗಳಲ್ಲಿ 3 ಜಯದೊಂದಿಗೆ ‘ಎ’ ಗುಂಪಿನಲ್ಲಿ ಭಾರತ ಅಗ್ರಸ್ಥಾನ ಪಡೆದರೆ,2 ಗೆಲುವು 1 ಸೋಲಿನೊಂದಿಗೆ ಪಾಕಿಸ್ತಾನ 2ನೇ ಸ್ಥಾನ ಪಡೆದ ‘ಸೂಪರ್ 4’ ಹಂತ ಪ್ರವೇಶಿಸಿತು. ‘ಬಿ’ ಗುಂಪಿನಿಂದ ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ 2ನೇ ಸುತ್ತಿಗೆ ಪ್ರವೇಶಿಸಿವೆ.