ಮಳೆಯ ಕಾರಣ 8 ಓವರ್'ಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 67 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಪಡೆ ಕೇವಲ 61 ರನ್ ಗಳಿಸಲಷ್ಟೇ ಶಕ್ತವಾಯಿತು.

ತ್ರಿವೆಂಡ್ರಂ(ನ.07): ತೀವ್ರ ರೋಚಕತೆಯಿಂದ ಕೂಡಿದ್ದ ಅಂತಿಮ ಟಿ20 ಪಂದ್ಯದಲ್ಲಿ 6 ರನ್'ಗಳ ಅಂತರದ ಜಯಭೇರಿ ಬಾರಿಸಿದ ವಿರಾಟ್ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.

ಮಳೆಯ ಕಾರಣ 8 ಓವರ್'ಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 67 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಪಡೆ ಕೇವಲ 61 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಕರಾರುವಕ್ಕಾದ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಕೇನ್ ವಿಲಿಯಮ್ಸನ್ ಮತ್ತು ಟಾಮ್ ಬ್ರೂಸ್ ರನೌಟ್ ಆದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ 8 ಓವರ್'ಗಳಲ್ಲಿ 5 ವಿಕೆಟ್ ಕಳೆದುಕೊಂಡು 67 ರನ್ ಕಲೆ ಹಾಕಿತು. ನಾಯಕ ವಿರಾಟ್ ಕೊಹ್ಲಿ ಕೇವಲ 6 ಎಸೆತಗಳಲ್ಲಿ 13 ರನ್ ಬಾರಿಸಿದರೆ, ಕನ್ನಡಿಗ ಮನೀಶ್ ಪಾಂಡೆ 17 ರನ್ ಬಾರಿಸಿ ತಂಡದ ಮೊತ್ತ 50ರ ಗಡಿ ದಾಟುವಂತೆ ಮಾಡಿದರು.

ಈ ಪಂದ್ಯವೂ ಸೇರಿದಂತೆ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ ಪಂದ್ಯ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಭಾರತ: 67/5 (8 ಓವರ್)

ಮನೀಶ್ ಪಾಂಡೆ: 17

ಹಾರ್ದಿಕ್ ಪಾಂಡ್ಯ: 14

ಥೀಮ್ ಸೌಥಿ: 13/2

ನ್ಯೂಜಿಲೆಂಡ್: 61/6(8 ಓವರ್)

ಕಾಲಿನ್ ಡಿ ಗ್ರ್ಯಾಂಡ್'ಹೋಂ : 17

ಗ್ಲೇನ್ ಫಿಲಿಪ್ಸ್: 11

ಬುಮ್ರಾ: 9/2