ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 182 ರನ್​ಗಳಿಸಿದ್ದ ಇಂಗ್ಲೆಂಡ್​ ಐದನೇ ದಿನವಾದ ಇಂದು ಅಶ್ವಿನ್ ಅಬ್ಬರಕ್ಕೆ ತತ್ತರಿಸಿತ್ತು. ಆರಂಭದಲ್ಲೇ ನಾಲ್ಕು ವಿಕೆಟ್​ ತೆಗೆಯುವ ಮೂಲಕ ಅಶ್ವಿನ್​ ಇಂಗ್ಲೆಂಡ್​ ಸರಣಿ ಸೋಲಿಗೆ ಕಾರಣರಾದರು. ಅಶ್ವಿನ್​ ಆರು ವಿಕೆಟ್ ಪಡೆದು ಮಿಂಚಿದ್ರು. ಇಂಗ್ಲೆಂಡ್​ 195 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್ ಮತ್ತು 36 ರನ್​ಗಳಿಂದ ಪಂದ್ಯ ಕೈ ಚೆಲ್ಲಿತು. ಐದು ಟೆಸ್ಟ್​'ಗಳ ಸರಣಿಯಲ್ಲಿ ಮೂರು ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿ ತನ್ನದಾಗಿಸಿಕೊಂಡಿದೆ.

ಮುಂಬೈ(ಡಿ.12): ಮುಂಬೈನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​'ನಲ್ಲಿ ಭಾರತ ಇನ್ನಿಂಗ್ಸ್ ಜಯ ದಾಖಲಿಸುವ ಮೂಲಕ ಐದು ಟೆಸ್ಟ್​'ಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಸರಣಿ ಗೆಲುವಿನ ಮೂಲಕ ಸತತ ಐದು ಟೆಸ್ಟ್​ ಸರಣಿ ಗೆದ್ದ ದಾಖಲೆ ಬರೆಯಿತು.

ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 182 ರನ್​ಗಳಿಸಿದ್ದ ಇಂಗ್ಲೆಂಡ್​ ಐದನೇ ದಿನವಾದ ಇಂದು ಅಶ್ವಿನ್ ಅಬ್ಬರಕ್ಕೆ ತತ್ತರಿಸಿತ್ತು. ಆರಂಭದಲ್ಲೇ ನಾಲ್ಕು ವಿಕೆಟ್​ ತೆಗೆಯುವ ಮೂಲಕ ಅಶ್ವಿನ್​ ಇಂಗ್ಲೆಂಡ್​ ಸರಣಿ ಸೋಲಿಗೆ ಕಾರಣರಾದರು. ಅಶ್ವಿನ್​ ಆರು ವಿಕೆಟ್ ಪಡೆದು ಮಿಂಚಿದ್ರು.

ಇಂಗ್ಲೆಂಡ್​ 195 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್ ಮತ್ತು 36 ರನ್​ಗಳಿಂದ ಪಂದ್ಯ ಕೈ ಚೆಲ್ಲಿತು. ಐದು ಟೆಸ್ಟ್​'ಗಳ ಸರಣಿಯಲ್ಲಿ ಮೂರು ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿ ತನ್ನದಾಗಿಸಿಕೊಂಡಿದೆ. ಸರಣಿ ಗೆದ್ದ ಖುಷಿಯಲ್ಲಿ ಟೀಮ್​ ಇಂಡಿಯಾ ಆಟಗಾರರು ಮೈದಾನದ ತುಂಬಾ ಒಂದು ಸುತ್ತು ಹಾಕುವ ಮೂಲಕ, ಐದು ದಿನಗಳಿಂದ ಉಭಯ ತಂಡಗಳನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೂ ಧನ್ಯವಾದ ತಿಳಿಸಿ ಸಂತಸದ ಕ್ಷಣದಲ್ಲಿ ತೇಲಾಡಿದರು.