ಈ ಸರಣಿಯ ಮುಂದಿನ ಮೂರು ಪಂದ್ಯಗಳಲ್ಲಿಯೂ ಆಸೀಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸ್ಮಿತ್ ಹೇಳಿದ್ದಾರೆ.

ಬೆಂಗಳೂರು(ಮಾ.03): ಮೊದಲ ಟೆಸ್ಟ್'ನಲ್ಲಿ ದಯಾನೀಯ ಸೋಲುಂಡಿರುವ ಟೀಂ ಇಂಡಿಯಾ ತೀವ್ರ ಒತ್ತಡದಲ್ಲಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್'ನಲ್ಲಿ ಟೀಂ ಇಂಡಿಯಾ 333 ರನ್'ಗಳ ಹೀನಾಯ ಸೋಲು ಕಂಡಿತ್ತು. ಸರಣಿಯನ್ನು ಜೀವಂತವಾಗಿಟ್ಟುಕೊಳ್ಳಲು ಕೊಹ್ಲಿ ಪಡೆ ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಉದ್ಯಾನ ನಗರಿಯ ಬ್ಯಾಟಿಂಗ್ ಸ್ನೇಹಿ ಪಿಚ್'ನಲ್ಲಿಯೂ ಸ್ಪಿನ್ನರ್ ಸ್ಟೀವ್ ಓಕೆಫೆ ಮಿಂಚಲಿದ್ದಾರೆ ಎಂದು ಆಸೀಸ್ ನಾಯಕ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ಎಲ್ಲರೂ ಟೀಂ ಇಂಡಿಯಾವೇ ಸರಣಿ ಗೆಲ್ಲುವ ಫೇವರೇಟ್ ತಂಡ ಎನ್ನುತ್ತಿದ್ದರು. ಆದರೆ ಪುಣೆ ಟೆಸ್ಟ್'ನಲ್ಲಿ ಆತಿಥೇಯರನ್ನು ಭಾರಿ ರನ್ ಅಂತರದಲ್ಲಿ ಸೋಲಿಸುವ ಮೂಲಕ ಅವರ ಮೇಲೆ ಒತ್ತಡ ಹೇರುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದಿದ್ದಾರೆ.

ಈ ಸರಣಿಯ ಮುಂದಿನ ಮೂರು ಪಂದ್ಯಗಳಲ್ಲಿಯೂ ಆಸೀಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸ್ಮಿತ್ ಹೇಳಿದ್ದಾರೆ.