ಕಳೆದ ತಿಂಗಳ ಯೂರೋಪ್ ಪ್ರವಾಸದಲ್ಲಿ ಅನುಭವ ಹಾಕಿ ಪಟು ಸರ್ದಾರ್ ಸಿಂಗ್ ಅವರನ್ನು ಕೈಬಿಡಲಾಗಿತ್ತು. ಇತ್ತೀಚೆಗಷ್ಟೇ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಸರ್ದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ನವದೆಹಲಿ(ಸೆ.17): ಇದೇ ಅಕ್ಟೋಬರ್ 11 ರಿಂದ 22 ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಗೆ 18 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರ ಸರ್ದಾರ್ ಸಿಂಗ್ ತಂಡಕ್ಕೆ ಕಮ್'ಬ್ಯಾಕ್ ಮಾಡಿದ್ದಾರೆ.

ಮನ್'ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಕರ್ನಾಟಕದ ಎಸ್.ವಿ.ಸುನಿಲ್ ಉಪನಾಯಕರಾಗಿದ್ದಾರೆ. ಕಳೆದ ತಿಂಗಳ ಯೂರೋಪ್ ಪ್ರವಾಸದಲ್ಲಿ ಅನುಭವ ಹಾಕಿ ಪಟು ಸರ್ದಾರ್ ಸಿಂಗ್ ಅವರನ್ನು ಕೈಬಿಡಲಾಗಿತ್ತು. ಇತ್ತೀಚೆಗಷ್ಟೇ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಸರ್ದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇವೇಳೆ ಯೂರೋಪ್ ಪ್ರವಾಸದಲ್ಲಿ ಮತ್ತಿಬ್ಬರು ಪ್ರಮುಖ ಆಟಗಾರರಾದ ಎಸ್.ವಿ. ಸುನಿಲ್ ಮತ್ತು ಆಕಾಶ್ ದೀಪ್ ಸಿಂಗ್ ಅವರನ್ನು ಕೈಬಿಡಲಾಗಿತ್ತು. ಈ ಇಬ್ಬರು ಆಟಗಾರರು ಈಗ ತಂಡ ಕೂಡಿಕೊಂಡಿದ್ದಾರೆ.

ಭಾರತ ‘ಎ’ ಗುಂಪಿನಲ್ಲಿದ್ದು ಜಪಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗುಂಪಿನಲ್ಲಿರುವ ಇತರೆ ತಂಡಗಳು. ಭಾರತ ಅ.11ರಂದು ಜಪಾನ್, ಅ.13ರಂದು ಬಾಂಗ್ಲಾ ಮತ್ತು ಅ.15ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ತಂಡದ ವಿವರ

ಗೋಲ್‌'ಕೀಪರ್ಸ್‌: ಆಕಾಶ್ ಚಿಕ್ಟೆ, ಸೂರಜ್.

ಡಿಫೆಂಡರ್ಸ್‌: ದೀಪನ್ಸ್ ಟಿರ್ಕೆ, ಕೊತಾಜಿತ್, ಸುರೇಂದರ್, ಹರ್ಮನ್‌ಪ್ರೀತ್, ವರುಣ್.

ಮಿಡ್ ಫೀಲ್ಡರ್ಸ್‌: ಎಸ್.ಕೆ. ಉತ್ತಪ್ಪ, ಸರ್ದಾರ್, ಮನ್‌ಪ್ರೀತ್(ನಾಯಕ), ಚಿಂಗ್ಲೆನ್‌'ಸಾನ, ಸುಮಿತ್. ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಆಕಾಶ್‌'ದೀಪ್, ರಮಣ್‌'ದೀಪ್, ಲಲಿತ್, ಗುರ್ಜಂತ್, ಸತ್ಬೀರ್.