ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂ ಸೌತ್ ವೇಲ್ಸ್ ವಿರುದ್ಧ ಒಂದು ಗೋಲು ಬಾರಿಸಲು ವನಿತೆಯರ ಎ ತಂಡಕ್ಕೆ ಸಾಧ್ಯವಾಗಲಿಲ್ಲ.

ಪರ್ತ್(ಸೆ.30): ಆಸ್ಟ್ರೇಲಿಯಾ ಹಾಕಿ ಲೀಗ್‌'ನ ಮಹಿಳಾ ವಿಭಾಗದಲ್ಲಿ ಭಾರತ ‘ಎ’ ಮಹಿಳಾ ಹಾಕಿ ತಂಡ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ 0-7 ಗೋಲುಗಳ ಅಂತರದ ಹೀನಾಯ ಸೋಲು ಕಂಡಿದೆ.

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂ ಸೌತ್ ವೇಲ್ಸ್ ವಿರುದ್ಧ ಒಂದು ಗೋಲು ಬಾರಿಸಲು ವನಿತೆಯರ ಎ ತಂಡಕ್ಕೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌'ನಲ್ಲಿ 3-0 ಮುನ್ನಡೆ ಹೊಂದಿದ್ದ ನ್ಯೂ ಸೌತ್ ವೇಲ್ಸ್ ತಂಡ, ಎರಡನೇ ಕ್ವಾರ್ಟರ್‌'ನಲ್ಲಿ ಮತ್ತೊಂದು ಗೋಲು ಬಾರಿಸಿ 4-0 ಯಿಂದ ಮುನ್ನಡೆಯಿತು.

ಇನ್ನು ಮೂರನೇ ಕ್ವಾರ್ಟರ್‌'ನಲ್ಲಿ ಯಾವುದೇ ಗೋಲು ಮೂಡಲಿಲ್ಲ. ಆದರೆ 4ನೇ ಮತ್ತು ಕೊನೆಯ ಕ್ವಾರ್ಟರ್‌'ನಲ್ಲಿ ಆಕ್ರಮಣಕಾರಿಯಾಟವಾಡಿದ ನ್ಯೂ ಸೌತ್ ವೇಲ್ಸ್ ಮತ್ತೆ 3 ಗೋಲು ಬಾರಿಸಿ ಭರ್ಜರಿ ಜಯ ಸಾಧಿಸಿತು.