ವಾಂಗೇರಿ(ಡಿ.03): ಕರ್ನಾಟಕದ ಭರವಸೆಯ ಸ್ಪಿನ್ನರ್ ಕೆ.ಗೌತಮ್ ಸ್ಪಿನ್ ಮೋಡಿಯ ನೆರವಿನಿಂದ ಭಾರತ ‘ಎ’ ಇಲ್ಲಿ ನಡೆಯುತ್ತಿರುವ 3ನೇ ಅನಧಿಕೃತ ಟೆಸ್ಟ್ 3ನೇ ದಿನವಾದ ಭಾನುವಾರ ನ್ಯೂಜಿಲೆಂ ‘ಎ’ ತಂಡವನ್ನು ಮೊದಲ ಇನ್ನಿಂಗ್ಸನಲ್ಲಿ 398 ರನ್ ಗಳಿಗೆ ಆಲೌಟ್ ಆಗಿದ್ದು ಪಂದ್ಯ ಡ್ರಾನತ್ತ ಸಾಗಿದೆ. 

4 ದಿನಗಳ ಪಂದ್ಯ ಇದಾಗಿದ್ದು ಭಾನುವಾರ 121 ರಗಳಿಂದ ಆಟ ಆರಂಭಿಸಿದ ಕಿವೀ ಪಡೆ ಮೊದಲ ಇನ್ನಿಂಗ್ಸನಲ್ಲಿ ಕ್ಯಾಮೆರಾ ಫ್ಲೆಚರ್(103) ಶತಕ ಹಾಗೂ ಬ್ರೇಸ್’ವೆಲ್(55) ಮತ್ತು ಜೆಮೀಸನ್(53)ರ ಅರ್ಧ ಶತಕದ ನೆರವಿನಿಂದ 75 ರನ್’ಗಳ ಮುನ್ನಡೆ ಸಾಧಿಸಿತು. 

ಭಾರತ ‘ಎ’ ಪರ ಕೆ. ಗೌತಮ್ 139 ರಗಳಿಗೆ 6 ವಿಕೆಟ್ ಪಡೆದರು. ಗೌತಮ್ ಸ್ಪಿನ್ ಮೋಡಿಗೆ ಕಿವೀಸ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದರು. ಸಿರಾಜ್ 2, ನವದೀಪ್, ರಜನೀಶ್ ತಲಾ  1 ವಿಕೆಟ್ ಕಬಳಿಸಿದರು. 2ನೇ ಇನ್ನಿಂಗ್ಸ ಆರಂಭಿಸಿರುವ ಭಾರತ ‘ಎ’, ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದ್ದು 37 ರನ್’ಗಳಿಂದ
ಹಿನ್ನಡೆಯಲ್ಲಿದೆ.