ತಿರುವನಂತಪುರಂ(ಜ.25): ಅಲ್ರೌಂಡರ್ ಪ್ರದರ್ಶನದ ಮೂಲಕ  ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ  138 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. 

ಇದನ್ನೂ ಓದಿ: ಐಪಿಎಲ್’ನ ಚಾಂಪಿಯನ್ ತಂಡ ಖರೀದಿಸಲು ಮುಂದಾದ ಬಚ್ಚನ್ ಕುಟುಂಬ..!

ನಾಯಕ ಅಜಿಂಕ್ಯ ರಹಾನೆ 91, ಹನುಮಾ ವಿಹಾರಿ 92, ಶ್ರೇಯಸ್ ಅಯ್ಯರ್ 65 ರನ್ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿತು. 304 ರನ್ ಬೃಹತ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್ ಹಾಗೂ ಅಕ್ಸರ್ ಪಟೇಲ್ ದಾಳಿಗೆ ಕುಸಿತಂ ಕಂಡಿತು.

ಇದನ್ನೂ ಓದಿ: ಇಂಡೋ-ಕಿವೀಸ್ ಕ್ರಿಕೆಟ್: ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ರೆಸ್ಟ್!

ಅಲೆಕ್ಸ್ ಡೇವಿಸ್ 48, ಲಿವಿಸ್ ಗ್ರೆಗೋರಿ 38 ರನ್ ಹೊರತು ಪಡಿಸಿದರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ. 37.4 ಓವರ್‌ಗಳಲ್ಲಿ 165 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 138 ರನ್ ಗೆಲುವು ಸಾಧಿಸಿತು.