ಟ್ರಾಫಿಕ್ ಜಾಮ್‌ನಿಂದ ಊಟ ಲೇಟ್- ಪಂದ್ಯ ಅರ್ಧ ಗಂಟೆ ವಿಸ್ತರಣೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 11:24 AM IST
India a vs australia a first session extended due to the Bangalore traffic
Highlights

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಿಸಿ ತಟ್ಟಿದೆ. ಅತೀಯಾದ ಟ್ರಾಫಿಕ್‌ನಿಂದ ಆಟಗಾರರಿಗೆ ಊಟ ಸರಿಯಾದ  ಸಮಯಕ್ಕೆ ತಲುಪದೇ ಪಂದ್ಯವನ್ನ ವಿಸ್ತರಣೆ ಮಾಡಿದ ಘಟನೆ ನಡೆದಿದೆ.

ಬೆಂಗಳೂರು(ಸೆ.09) : ಮಳೆ, ಪಿಚ್ ಸರಿಯಿಲ್ಲ, ಮಂದ ಬೆಳಕು ಹೀಗೆ ಹಲವು ಕಾರಣಗಳಿಂದ ಪಂದ್ಯಗಳನ್ನು ಮುಂದೂಡಿದ್ದು ಅಥವಾ ರದ್ದುಗೊಳಿಸಿದ್ದನ್ನು ಕೇಳಿದ್ದೇವೆ. ಆದರೆ, ಟ್ರಾಫಿಕ್ ಜಾಮ್‌ನಿಂದ ಟೆಸ್ಟ್ ಪಂದ್ಯದ ಒಂದು ಅವಧಿ (ಸೆಷನ್) ಅನ್ನು ಅರ್ಧ ಗಂಟೆ ವಿಸ್ತರಣೆ ಮಾಡಿದ್ದನ್ನು ಕೇಳಿದ್ದೀರಾ?.

ಇಂತಹ ಅಪರೂಪದ ಘಟನೆಗೆ ನಡೆದಿದ್ದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರು ಟ್ರಾಫಿಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಬಿಸಿ ಅನಧೀಕೃತ ಟೆಸ್ಟ್ ಪಂದ್ಯಕ್ಕೂ ತಟ್ಟಿದೆ.

ಬೆಂಗಳೂರು ಹೊರ ವಲಯದ ಆಲೂರಿನಲ್ಲಿ  ಭಾರತ ‘ಎ’ ಹಾಗೂ ಆಸ್ಟ್ರೇಲಿಯಾ ‘ಎ’ ನಡುವಿನ 2ನೇ ಅನಧಿಕೃತ ಟೆಸ್ಟ್ ಶನಿವಾರದಿಂದ ಪಂದ್ಯ ಆರಂಭವಾಗಿದ್ದು,
ಸಂಚಾರ ದಟ್ಟಣೆ ಕಾರಣ ಸೂಕ್ತ ಸಮಯಕ್ಕೆ ಆಟಗಾರರಿಗೆ ತಲುಪಬೇಕಿದ್ದ ಆಹಾರ ಕ್ರೀಡಾಂಗಣ ತಲುಪಲಿಲ್ಲ. ಆದಕಾರಣ ಬೆಳಿಗ್ಗೆ 11.30ಕ್ಕೆ ಮುಕ್ತಾಯಗೊಳ್ಳಬೇಕಾದ ಮೊದಲ ಅವಧಿಯನ್ನು 12ರ ವರೆಗೆ ವಿಸ್ತರಿಸಲಾಯಿತು.

loader