Asianet Suvarna News Asianet Suvarna News

ಮತ್ತೊಂದು ಸಚಿನ್ ದಾಖಲೆ ಉಡೀಸ್ ಮಾಡಿದ ಕೊಹ್ಲಿ

ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್’ನ ಇಂದಿನ ಪಂದ್ಯದಲ್ಲೂ ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 

Ind Vs WI Test Virat Kohli breaks Sachin Tendulkar's record becomes quickest Indian to score 24 centuries
Author
Rajkot, First Published Oct 5, 2018, 12:29 PM IST

ರಾಜ್’ಕೋಟ್[ಅ.05]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಇದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಬಾರಿಸಿದ 24ನೇ ಶತಕವಾಗಿದೆ. 

ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್’ನ ಇಂದಿನ ಪಂದ್ಯದಲ್ಲೂ ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 

* ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್’ನಲಲಿ 24 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕೇವಲ 123 ಇನ್ನಿಂಗ್ಸ್’ಗಳಲ್ಲಿ 24 ಶತಕ ಸಿಡಿಸುವ ಮೂಲಕ ಸಚಿನ್ ತೆಂಡುಲ್ಕರ್[125] ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಶತಕ ಸಿಡಿಸಿದ ದಾಖಲೆ ಕ್ರಿಕೆಟ್ ದಂತಕತೆ ಎನಿಸಿರುವ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ ಕೇವಲ 66 ಇನ್ನಿಂಗ್ಸ್’ಗಳಲ್ಲಿ 24 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

* ಟೆಸ್ಟ್ ಕ್ರಿಕೆಟ್’ನಲ್ಲಿ 24 ಶತಕ ಸಿಡಿಸುವುದರೊಂದಿಗೆ ಭಾರತ ಪರ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 72 ಟೆಸ್ಟ್’ನಲ್ಲಿ ವಿರಾಟ್ 24 ಶತಕ ಸಿಡಿಸಿದರೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ 103 ಟೆಸ್ಟ್ ಪಂದ್ಯಗಳನ್ನಾಡಿ 23 ಶತಕ ಸಿಡಿಸಿದ್ದರು.  

* ಅತಿ ಹೆಚ್ಚು ಶತಕ ಸಿಡಿಸಿದ 3ನೇ ನಾಯಕ: ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಬಾರಿಸಿದ 17ನೇ ಶತಕ ಇದಾಗಿದೆ. ಈ ಮೂಲಕ ನಾಯಕನಾಗಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ [25 ಶತಕ] ಮೊದಲ ಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್[19] ಎರಡನೇ ಸ್ಥಾನದಲ್ಲಿದ್ದಾರೆ.

* ಪ್ರಸಕ್ತ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಒಂದು ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ಜತೆಗೆ 2016[1215 ರನ್], 2017[1059 ರನ್] 2018[1000*] ಬಾರಿಸುವ ಮೂಲಕ ಸತತ ಮೂರು ವರ್ಷ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

* ಇದು ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ ಎರಡನೇ ಶತಕ ಜತೆಗೆ, ತವರಿನಲ್ಲಿ ಬಾರಿಸುತ್ತಿರುವ 11ನೇ ಶತಕವಾಗಿದೆ.

* ಇದು ವಿರಾಟ್ ಕೊಹ್ಲಿ ಈ ವರ್ಷ ಬಾರಿಸುತ್ತಿರವ 4ನೇ ಶತಕ ಹಾಗೂ 4ನೇ ಕ್ರಮಾಂಕದಲ್ಲಿ ಬಾರಿಸಿದ 20ನೇ ಶತಕ ಇದಾಗಿದೆ.

Follow Us:
Download App:
  • android
  • ios