Asianet Suvarna News Asianet Suvarna News

ಚೊಚ್ಚಲ ಪಂದ್ಯದಲ್ಲೇ ಪೃಥ್ವಿ ಶತಕ: ಟ್ವಿಟರ್’ನಲ್ಲಿ ಮುಂಬೈ ಪ್ರತಿಭೆಯ ಗುಣಗಾನ

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದ ಪೃಥ್ವಿ ಶಾ, ಇದೀಗ ಪದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೊದಲ ಕಿರಿಯ ಬ್ಯಾಟ್ಸ್’ಮನ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Ind Vs WI Test Twitter reactions on Prithvi Shaw century on debut
Author
Rajkot, First Published Oct 4, 2018, 3:09 PM IST
  • Facebook
  • Twitter
  • Whatsapp

ರಾಜ್’ಕೋಟ್[ಅ.04]: ಮುಂಬೈನ ಯುವ ಪ್ರತಿಭೆ ಚೊಚ್ಚಲ ಪಂದ್ಯದಲ್ಲಿಯೇ ಸ್ಫೋಟಕ ಶತಕ ಸಿಡಿಸುವ ಮೂಲಕ ಅಂತರಾಷ್ಟ್ರೀಯ ವೃತ್ತಿಜೀವನದ ಆರಂಭವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದ ಪೃಥ್ವಿ ಶಾ, ಇದೀಗ ಪದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೊದಲ ಕಿರಿಯ ಬ್ಯಾಟ್ಸ್’ಮನ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೇವಲ 99 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ವಿಶ್ವ ಕ್ರಿಕೆಟ್’ನಲ್ಲಿ ಚೊಚ್ಚಲ ಪಂದ್ಯದಲ್ಲೇ ಅತಿವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಹಾಗೂ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ. 

ಪೃಥ್ವಿ ಶಾ ಪ್ರದರ್ಶನ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ...

Follow Us:
Download App:
  • android
  • ios