Asianet Suvarna News Asianet Suvarna News

ಕೆರಿಬಿಯನ್ನರ ಮೇಲೆ ಪೃಥ್ವಿ ಸವಾರಿ: ಮೊದಲ ಪಂದ್ಯದಲ್ಲೇ ಶಾ 50*

ಆರಂಭದಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಪೃಥ್ವಿ ಆಸರೆಯಾದರು. ವೆಸ್ಟ್ ಇಂಡೀಸ್ ಬೌಲರ್’ಗಳ ಮೇಲೆ ಸವಾರಿ ಮಾಡಿದ ಪೃಥ್ವಿ ಶಾ ಕೇವಲ 56 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಪೂರೈಸಿದ್ದಾರೆ.

Ind vs WI Test Prithvi Shaw aggressive as India raise fifty
Author
Rajkot, First Published Oct 4, 2018, 11:08 AM IST
  • Facebook
  • Twitter
  • Whatsapp

ರಾಜ್’ಕೋಟ್[ಅ.04]: ಮುಂಬೈನ ಯುವ ಪ್ರತಿಭೆ ಪೃಥ್ವಿ ಶಾ ಪದಾರ್ಪಣ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭರ್ಜರಿಯಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ್ದಾರೆ.

ಆರಂಭದಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಪೃಥ್ವಿ ಆಸರೆಯಾದರು. ವೆಸ್ಟ್ ಇಂಡೀಸ್ ಬೌಲರ್’ಗಳ ಮೇಲೆ ಸವಾರಿ ಮಾಡಿದ ಪೃಥ್ವಿ ಶಾ ಕೇವಲ 56 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಪೂರೈಸಿದ್ದಾರೆ. ಈ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್’ನ ಪದಾರ್ಪಣ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿದ ಅತಿ ಕಿರಿಯ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಭಾರತ ಇದೀಗ ಒಂದು ವಿಕೆಟ್ ನಷ್ಟಕ್ಕೆ 92 ಪೂಜಾರ 39 ಹಾಗೂ ಪೃಥ್ವಿ ಶಾ 52 ರನ್ ಬಾರಿಸಿ ಇನ್ನಿಂಗ್ಸ್ ಮುಂದುವರೆಸಿದ್ದಾರೆ

Follow Us:
Download App:
  • android
  • ios