Asianet Suvarna News Asianet Suvarna News

ಮೊದಲ ಟೆಸ್ಟ್ ಗೆದ್ದ ಭಾರತ: ದಿಗ್ಗಜ ನಾಯಕನ ದಾಖಲೆ ಅಳಿಸಿ ಹಾಕಿದ ಕೊಹ್ಲಿ..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 272 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.

Ind Vs WI Test India records biggest innings win ever
Author
Bengaluru, First Published Oct 6, 2018, 5:45 PM IST

ಬೆಂಗಳೂರು[ಅ.06]: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 272 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪೃಥ್ವಿ ಶಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕ ಶತಕಗಳ ನೆರವಿನಿಂದ ಬರೋಬ್ಬರಿ 649 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ತಂಡ ಎರಡು ಇನ್ನಿಂಗ್ಸ್’ಗಳಲ್ಲಿ ಒಟ್ಟು 181 ಹಾಗೂ 196 ಗಳಿಸಿ ಟೀಂ ಇಂಡಿಯಾಗೆ ಶರಣಾಯಿತು. ನಾಯಕನಾಗಿ ವಿರಾಟ್ ಕೊಹ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿದರೆ, ಬೌಲಿಂಗ್’ನಲ್ಲಿ ಕುಲ್ದೀಪ್ ಯಾದವ್ ಕೂಡ ಅಪರೂಪದ ದಾಖಲೆ ಬರೆದರು. ರಾಜ್’ಕೋಟ್’ನಲ್ಲಿ ನಡೆದ ಮೊದಲ ಪಂದ್ಯ ಹಲವು ದಾಖಲೆಗಳಿಗೂ ಸಾಕ್ಷಿಯಾಯಿತು. ಅಂತಹ ದಾಖಲೆಗಳಲ್ಲಿ ಪ್ರಮುಖವಾದ ಅಂಕಿ-ಅಂಶಗಳು ನಿಮ್ಮ ಮುಂದೆ...

* ವಿಂಡೀಸ್ ವಿರುದ್ಧ ಎರಡನೇ ಇನ್ನಿಂಗ್ಸ್’ನಲ್ಲಿ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸುವುದರೊಂದಿಗೆ [ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್] ಮೂರು ಮಾದರಿಯಲ್ಲೂ 5 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನ್ನುವ ದಾಖಲೆ ನಿರ್ಮಿಸಿದರು. ಜತೆಗೆ ಇಮ್ರಾನ್ ತಾಹಿರ್ ಮತ್ತು ಅಜಂತ ಮೆಂಡಿಸ್ ಬಳಿಕ ಈ ಸಾಧನೆ ಮಾಡಿದ ಮೂರನೇ ಸ್ಪಿನ್ನರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.

* ಟೆಸ್ಟ್ ಕ್ರಿಕೆಟ್’ನಲ್ಲಿ ತವರಿನಲ್ಲಿ ಭಾರತ ಪರ ಅತಿ ಹೆಚ್ಚು ಪಂದ್ಯ ಗೆದ್ದುಕೊಟ್ಟ ಎರಡನೇ ನಾಯಕ ಎನ್ನುವ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್[13 ಗೆಲುವು] ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಧೋನಿ [21] ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ[14] ಎರಡನೇ ಸ್ಥಾನದಲ್ಲಿದ್ದಾರೆ.

* ಪದಾರ್ಪಣೆ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ 6ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಯುವ ಕ್ರಿಕೆಟಿಗ ಪೃಥ್ವಿ ಶಾ ಪಾತ್ರರಾಗಿದ್ದಾರೆ. ಈ ಮೊದಲು ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ..
ಪ್ರವೀಣ್ ಆಮ್ರೆ-1992
ಆರ್’ಪಿ ಸಿಂಗ್-2006
ಆರ್. ಅಶ್ವಿನ್-2011
ಶಿಖರ್ ಧವನ್-2013
ರೋಹಿತ್ ಶರ್ಮಾ-2013
ಪೃಥ್ವಿ ಶಾ-2018

* ಇದು ತವರಿನಲ್ಲಿ ಭಾರತದ 100ನೇ ಟೆಸ್ಟ್ ಗೆಲುವಾಗಿದೆ. ಈ ಮೂಲಕ ಈ ಸಾಧನೆ ಮಾಡಿದ 4ನೇ ತಂಡ ಎನ್ನುವ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

* ಇನ್ನಿಂಗ್ಸ್ ಹಾಗೂ 272 ರನ್’ಗಳ ಜಯ- ಇದು ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಈ ಮೊದಲು ಆಫ್ಘಾನಿಸ್ತಾನದ ಎದುರು ಬೆಂಗಳುರಿನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 262 ರನ್’ಗಳ ಗೆಲುವು ದಾಖಲಿಸಿದ ಸಾಧನೆ ಮಾಡಿತ್ತು.   
 

Follow Us:
Download App:
  • android
  • ios