ರಾಜ್’ಕೋಟ್[ಅ.06]: ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೇಸ್[53] ಹಾಗೂ ಕೀಮೋ ಪೌಲ್[47] ಬ್ಯಾಟಿಂಗ್ ಹೊರತಾಗಿಯೂ ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಕೇವಲ ರನ್’ಗಳಿಗೆ ಸರ್ವಪತನ ಕಾಣುವುದರೊಂದಿಗೆ 181 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್’ನಲ್ಲಿ  468 ರನ್’ಗಳ ಹಿನ್ನಡೆ ಅನುಭವಿಸಿದೆ. ಇದೀಗ ವಿರಾಟ್ ಪಡೆ ವೆಸ್ಟ್ ಇಂಡೀಸ್ ಮೇಲೆ ಫಾಲೋ ಆನ್ ಹೇರಿದೆ.

ಮೊದಲ ದಿನವೇ ಕೇವಲ 94 ರನ್’ಗಳಿಗೆ ಅಗ್ರ ಕ್ರಮಾಂಕದ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ರೋಸ್ಟನ್ ಚೇಸ್ ಹಾಗೂ ಕೀಮೋ ಪೌಲ್ ಆಸರೆಯಾದರು. ಚೇಸ್ ಅರ್ಧಶತಕ ಸಿಡಿಸಿದರೆ, ಕೀಮೋ ಕೇವಲ ಮೂರು ರನ್’ಗಳಿಂದ ಅರ್ಧಶತಕ ವಂಚಿತರಾದರು. ಈ ಜೋಡಿ 7ನೇ ವಿಕೆಟ್’ಗೆ 73 ರನ್ ಕಲೆಹಾಕುವುದರೊಂದಗೆ ತಂಡದ ಮೊತ್ತವನ್ನು 150ರ ಸಮೀಪ ಕೊಂಡ್ಯೊಯ್ದಿತು. ಈ ಜೋಡಿಯನ್ನು ಉಮೇಶ್ ಯಾದವ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೌಲ್ ಪೂಜಾರಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಚೇಸ್ ಅವರನ್ನು ಬಲಿ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು. 

ಭಾರತ ಪರ ಅಶ್ವಿನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಮೊಹಮ್ಮದ್ ಶಮಿ 2 ಹಾಗೂ ಕುಲ್ದೀಪ್, ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 649/9
ವಿರಾಟ್ ಕೊಹ್ಲಿ: 139
ದೇವೇಂದ್ರ ಬಿಶೂ: 217/4

ವೆಸ್ಟ್ ಇಂಡೀಸ್: 181/10
ರೋಸ್ಟನ್ ಚೇಸ್: 53
ಅಶ್ವಿನ್: 37/4
[* ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ]