ರಾಜ್’ಕೋಟ್[ಅ.06]: ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಸೋಲಿನತ್ತ ಮುಖ ಮಾಡಿದ್ದು ಚಹಾ ವಿರಾಮದ ವೇಳೆಗೆ 2ನೇ ಇನ್ನಿಂಗ್ಸ್’ನಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಬಾರಿಸಿದೆ. ಈ ಮೂಲಕ ಇನ್ನೂ 283 ರನ್’ಗಳ ಹಿನ್ನಡೆ ಅನುಭವಿಸಿದೆ.

ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 181 ರನ್’ಗಳಿಗೆ ಆಲೌಟ್ ಆಗಿ ಫಾಲೋ ಆನ್’ಗೆ ಒಳಗಾಗಿದ್ದ ಕೆರಿಬಿಯನ್ ಪಡೆ ಎರಡನೇ ಇನ್ನಿಂಗ್ಸ್’ನಲ್ಲೂ ಹೀನಾಯ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದೆ. ಆರಂಭಿಕ ಕಿರಾನ್ ಪೋವೆಲ್ ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. 

ಕುಲ್ದೀಪ್ 57 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ ಒಂದು ವಿಕೆಟ್ ಕಬಳಿಸಿದ್ದಾರೆ