ವಿಶಾಖಪಟ್ಟಣ(ಅ.24):  ಅದ್ಭುತ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶಾಖಪಟ್ಟಣದಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಲು ಕೊಹ್ಲಿಗೆ ಇನ್ನೂ81 ರನ್ ಅವಶ್ಯಕವಾಗಿದೆ. ಈಗಷ್ಟೇ ಕೊಹ್ಲಿ 204 ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗದ 10 ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ಸದ್ಯ ಭಾರತದ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ಈ ಸಾಧನೆ ಮಾಡಲು 259 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. 

ಭಾರತದ ನಾಲ್ವರು ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ10 ಸಾವಿರ ರನ್‌ಗಳಿಸಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ಧನೆ 333 ಇನಿಂಗ್ಸ್‌ಗಳಲ್ಲಿ 10 ಸಾವಿರ ರನ್‌ಗಳಿಸಿದ್ದರು. ಉಳಿದಂತೆ ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ (263) ಇನಿಂಗ್ಸ್, ರಾಹುಲ್ ದ್ರಾವಿಡ್ (287) ಇನಿಂಗ್ಸ್ ಮತ್ತು ಎಂ.ಎಸ್. ಧೋನಿ (273) ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 

ಶರವೇಗದ 10 ಸಹಸ್ರ ರನ್ ಸರದಾರರು

ಆಟಗಾರ ಇನಿಂಗ್ಸ್
ಸಚಿನ್ ತೆಂಡುಲ್ಕರ್ 259
ಸೌರವ್ ಗಂಗೂಲಿ 263
ರಿಕ್ಕಿ ಪಾಂಟಿಂಗ್ 266
ಜಾಕ್ ಕಾಲೀಸ್ 272
ಎಂ.ಎಸ್. ಧೋನಿ 273