Asianet Suvarna News Asianet Suvarna News

ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಜಮೈಕಾದ ಸಬೀನಾ ಪಾರ್ಕ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈಗಾಗಲೇ ಮೊದಲ ಪಂದ್ಯ ಜಯಿಸಿರುವ ವಿರಾಟ್ ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Ind vs WI 2nd Test Team India eyes on Cean sweep over Windies
Author
Jamaica, First Published Aug 30, 2019, 11:45 AM IST

ಕಿಂಗ್ಸಟನ್(ಆ.30): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ತಂಡ, ಇದೀಗ ಮತ್ತೊಂದು ಜಯದ ಲೆಕ್ಕಚಾರದೊಂದಿಗೆ ಕಣಕ್ಕಿಳಿಯುತ್ತಿದೆ.

ಶುಕ್ರವಾರದಿಂದ ಇಲ್ಲಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಎಲ್ಲಾ ವಿಭಾಗದಲ್ಲೂ ಉತ್ತಮ ಆಟಗಾರರನ್ನು ಹೊಂದಿರುವ ಟಿಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯವನ್ನು 318 ರನ್‌ಗಳ ಅಂತರದಲ್ಲಿ ಗೆದ್ದಿದ್ದ ವಿರಾಟ್ ಕೊಹ್ಲಿ ಪಡೆ, 2ನೇ ಪಂದ್ಯದಲ್ಲಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.

ಕೇರಳ ಕ್ರಿಕೆಟ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ನಾಯಕ!

ಭಾರತ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕರನ್ನು ಹೊರತುಪಡಿಸಿದರೆ, ಮಧ್ಯಮ ಕ್ರಮಾಂಕ, ಬೌಲರ್‌ಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ನಾಯಕ ಕೊಹ್ಲಿ, ಅಜಿಂಕ್ಯ ರಹಾನೆ, ಹನುಮ ವಿಹಾರಿ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರೆ, ವೇಗಿಗಳಾದ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಪ್ರಾಬಲ್ಯ ಸಾಧಿಸಿದರು. ಭಾರತ ತಂಡದ ಆಟಗಾರರ ಬಲ ಏನೆಂಬುದು ಮೊದಲ ಟೆಸ್ಟ್ನಲ್ಲಿ ವಿಂಡೀಸ್ ತಂಡದ ಅರಿವಿಗೆ ಬಂದಿದೆ.

ಆದರೆ ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ಪಡೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ತವರಿನ ತಂಡಗಳು ಯಾವ ಸಮಯದಲ್ಲಾದರೂ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿವೆ. ವಿಂಡೀಸ್ ಕೂಡ ಹಾಗೆಯೇ ಇದೆ. ಟಿ20, ಏಕದಿನ ಸರಣಿಗಳನ್ನು ಸೋತಿರುವ ವಿಂಡೀಸ್, ಟೆಸ್ಟ್ ಸರಣಿಯಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. 2ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಕನಸು ಕಾಣುತ್ತಿದೆ.

ಕಪಿಲ್ ದೇವ್ ದಾಖಲೆ ಮುರಿಯಲು ಸಜ್ಜಾದ ಇಶಾಂತ್ ಶರ್ಮಾ!

ಮೊದಲ ಟೆಸ್ಟ್‌ನಲ್ಲಿ ಕರ್ನಾಟಕದ ಇಬ್ಬರು ಆಟಗಾರರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಮಯಾಂಕ್ 2 ಇನ್ನಿಂಗ್ಸ್ ಗಳಲ್ಲಿ ವೈಫಲ್ಯ ಕಂಡರೇ, ರಾಹುಲ್ ಸಮಾಧಾನಕರ ಪ್ರದರ್ಶನ ನೀಡಿದರು. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ಹೊರಬರಲಿಲ್ಲ. ಇದ್ದಿದ್ದರಲ್ಲಿ ಹನುಮ ವಿಹಾರಿ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ ತಂಡಕ್ಕೆ ಆಸರೆಯಾಗಿದ್ದರು. ಆದರೆ ಒಂದೇ ಪಂದ್ಯದಲ್ಲಿ ಆಟಗಾರನ ಪ್ರದರ್ಶನವನ್ನು ಅಳೆಯುವುದು ಕಷ್ಟ. ಹೀಗಾಗಿ ಮಯಾಂಕ್, ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೇ ರೋಹಿತ್ ಶರ್ಮಾ 11ರ ಬಳಗದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ರೋಹಿತ್ ತಂಡದಲ್ಲಿ ಸ್ಥಾನ ಪಡೆದರೆ, ಮಯಾಂಕ್ ಹೊರಗುಳಿಯಬೇಕಾಗುತ್ತದೆ.

2ನೇ ಟೆಸ್ಟ್‌ ಪಂದ್ಯಕ್ಕೆ ವಿಂಡೀಸ್‌ ತಂಡ ಪ್ರಕಟ; ಗೇಲ್‌ಗೆ ಶಾಕ್..!

ಬುಮ್ರಾ, ಇಶಾಂತ್ ಬಲ: ಮೊದಲ ಟೆಸ್ಟ್ ನಲ್ಲಿ ಬೌಲಿಂಗ್ ಪಡೆಯನ್ನು ವೇಗಿ ಬೂಮ್ರಾ ಮುನ್ನಡೆಸಿದ್ದರು. 2ನೇ ಟೆಸ್ಟ್‌ನಲ್ಲಿ ಕೂಡ ಬುಮ್ರಾ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಅನುಭವಿ ಇಶಾಂತ್, ಮೊಹಮದ್ ಶಮಿ ಬಲ ಹೆಚ್ಚಿಸಲಿದ್ದಾರೆ. ಇಲ್ಲಿನ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಸ್ಪಿನ್ ವಿಭಾಗದಲ್ಲಿ ಆರ್.ಅಶ್ವಿನ್, ಜಡೇಜಾ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ ನಾಲ್ವರು ಬೌಲರ್‌ಗಳೊಂದಿಗೆ ಕೊಹ್ಲಿ ಕಣಕ್ಕಿಳಿದಿದ್ದರು. 2ನೇ ಟೆಸ್ಟ್‌ನಲ್ಲಿ ಕೊಹ್ಲಿ ಐವರು ಬೌಲರ್ಗಳೊಂದಿಗೆ ಆಡುವ ಸಾಧ್ಯತೆಯಿದೆ.

ಪುಟಿದೇಳುವ ವಿಶ್ವಾಸದಲ್ಲಿ ವಿಂಡೀಸ್:
ವಿಂಡೀಸ್ ಹೆಚ್ಚಾಗಿ ಯುವಕರನ್ನೆ ನಂಬಿಕೊಂಡಿದೆ. ಹೆಟ್ಮೇಯರ್, ಶಾಯ್ ಹೋಪ್, ಕ್ಯಾಂಪ್‌ಬೆಲ್ ಅವರಂತಹ ಯುವಆಟಗಾರರೊಂದಿಗೆ ಅನುಭವಿ ಡರೇನ್ ಬ್ರಾವೊ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ತುಂಬಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕಳಪೆ ಬ್ಯಾಟಿಂಗ್‌ನಿಂದ ಕಂಗೆಟ್ಟಿದ್ದ ವಿಂಡೀಸ್ ಕೊನೆಯ ಟೆಸ್ಟ್‌ನಲ್ಲಿ ಎಚ್ಚರಿಕೆಯ ಆಟವಾಡುವ ವಿಶ್ವಾಸದಲ್ಲಿದೆ. 

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಟೆನ್ 1
 

Follow Us:
Download App:
  • android
  • ios