Asianet Suvarna News Asianet Suvarna News

ವಿಂಡೀಸ್ ಟೆಸ್ಟ್: ರಹಾನೆ ಶತಕ, ಭಾರತದ ಬಿಗಿಹಿಡಿತದಲ್ಲಿ ಕೆರಬಿಯನ್ನರು

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 400 ರನ್‌ಗಳ ಮುನ್ನಡೆ ಸಾಧಿಸಿದೆ. ಅಜಿಂಕ್ಯ ರಹಾನೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ind vs WI 1st Test Ajinkya Rahane falls after ton but puts India in control
Author
Antigua, First Published Aug 25, 2019, 10:38 PM IST

ಆ್ಯಂಟಿಗ[ಆ.25]: ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ[102] ಹಾಗೂ ಹನುಮ ವಿಹಾರಿ[82] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 110 ಓವರ್ ಮುಕ್ತಾಯದ ವೇಳೆಗೆ 5 ವಿಕೆಟ್ 329 ರನ್ ಬಾರಿಸಿದ್ದು, ಒಟ್ಟಾರೆ 404 ರನ್’ಗಳ ಭಾರೀ ಮುನ್ನಡೆ ಗಳಿಸಿದೆ. ಇದರೊಂದಿಗೆ ಮೊದಲ ಟೆಸ್ಟ್’ನಲ್ಲಿ ಭಾರತ ತಂಡವು ವಿಂಡೀಸ್ ಎದುರು ಬಿಗಿ ಹಿಡಿತ ಸಾಧಿಸಿದೆ.

ಮೊದಲ ಟೆಸ್ಟ್ ಪಂದ್ಯ: ಮೇಲುಗೈ ಸಾಧಿಸಿದ ಭಾರತ

ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದ್ದ ಭಾರತ ನಾಲ್ಕನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ತಮ್ಮ ಖಾತೆಗೆ ಒಂದೂ ರನ್ ಸೇರಿಸದೇ ಕೊಹ್ಲಿ ಪೆವಿಲಿಯನ್ ಸೇರಿದರು. ರೋಸ್ಟನ್ ಚೇಸ್ ಆರಂಭದಲ್ಲಿ ವಿಂಡೀಸ್’ಗೆ ಯಶಸ್ಸನ್ನು ಒದಗಿಸಿಕೊಟ್ಟರು. ಇದರೊಂದಿಗೆ ರಹಾನೆ ಜತೆಗಿನ 106 ರನ್’ಗಳ ಕೊಹ್ಲಿ ಜತೆಯಾಟಕ್ಕೆ ತೆರೆಬಿತ್ತು. ಇನ್ನು ಆ ಬಳಿಕ ಹನುಮ ವಿಹಾರಿ ಜತೆ ಇನಿಂಗ್ಸ್ ಮುಂದುವರೆಸಿದ ರಹಾನೆ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಗಮನ ಸೆಳೆದರು. ಉಪನಾಯಕನಿಗೆ ಹನುಮ ವಿಹಾರಿ ಕೂಡಾ ಉತ್ತಮ ಸಾಥ್ ನೀಡಿದರು. 5 ನೇ ವಿಕೆಟ್’ಗೆ ಈ ಜೋಡಿ 135 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 320ರ ಗಡಿ ದಾಟಿಸಿದರು. ಸಾಕಷ್ಟು ಎಚ್ಚರಿಕೆಯ ಆಟವಾಡಿದ ರಹಾನೆ 242 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 102 ರನ್ ಬಾರಿಸಿದರು. ಇದರೊಂ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ರಹಾನೆ ಭಾಜನರಾದರು. ಅಂದಹಾಗೆ ಇದು ರಹಾನೆ ಟೆಸ್ಟ್ ವೃತ್ತಿಜೀವನದ 10ನೇ ಶತಕವಾಗಿದೆ.

ಟೀಂ ಇಂಡಿಯಾ ಎದುರು ವಿಂಡೀಸ್ ಆಲೌಟ್ @222

ರಹಾನೆ 102 ರನ್ ಬಾರಿಸಿ ಗೇಬ್ರಿಯಲ್’ಗೆ ವಿಕೆಟ್ ಒಪ್ಪಿಸಿದರು. ಮತುದಿಯಲ್ಲಿ ಹನುಮ ವಿಹಾರಿ 82 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇವರಿಗೆ ರಿಷಭ್ ಪಂತ್ ಸಾಥ್ ನೀಡಿದ್ದಾರೆ.   

ಸಂಕ್ಷಿಪ್ತ ಸ್ಕೋರ್:

ಭಾರತ: 297& 329/5
ಅಜಿಂಕ್ಯ ರಹಾನೆ: 102
ವೆಸ್ಟ್ ಇಂಡೀಸ್: 222

Follow Us:
Download App:
  • android
  • ios