ಟೀಂ ಇಂಡಿಯಾ ಎದುರು ವಿಂಡೀಸ್ ಆಲೌಟ್ @222
ಟೀಂ ಇಂಡಿಯಾ ಬೌಲರ್‌ಗಳ ಮಿಂಚಿನ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 222 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಭಾರತ 75 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಆ್ಯಂಟಿಗ[ಆ.24]: ಟೀಂ ಇಂಡಿಯಾ ಸಂಘಟಿತ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 222 ರನ್’ಗಳಿಗೆ ಸರ್ವಪತನ ಕಂಡಿದೆ. ಇದೀಗ ಭಾರತ ಮೊದಲ ಇನಿಂಗ್ಸ್’ನಲ್ಲಿ 75 ರನ್’ಗಳ ಮುನ್ನಡೆ ಸಾಧಿಸಿದೆ.
ಇಶಾಂತ್ ದಾಳಿಗೆ ತತ್ತರ; ಅಲೌಟ್ ಭೀತಿಯಲ್ಲಿ ವಿಂಡೀಸ್!
ಮೊದಲ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿತ್ತು. 10 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ನಾಯಕ ಜೇಸನ್ ಹೋಲ್ಡರ್ 39 ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮಿಗೆಲ್ ಕಮಿನ್ಸ್ 45 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಪರ ಮೊದಲ ದಿನವೇ ಇಶಾಂತ್ ಶರ್ಮಾ 5 ವಿಕೆಟ್ ಪಡೆದರೆ, ಶಮಿ-ಜಡೇಜಾ ತಲಾ 2 ಹಾಗೂ ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ: 297/10
ರಹಾನೆ:81
ರೋಚ್: 66/4
ವೆಸ್ಟ್ ಇಂಡೀಸ್: 222/10
ರೋಸ್ಟನ್ ಚೇಸ್: 48
ಇಶಾಂತ್ ಶರ್ಮಾ: 43/5