ಹ್ಯಾಮಿಲ್ಟನ್[ಫೆ.10]: ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆ ಮಾಡಲಾಗಿದೆ.

ಭಾರತ ಪರ ಯುಜುವೇಂದ್ರ ಚಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಕುಲ್ದೀಪ್ ಯಾದವ್’ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ನ್ಯೂಜಿಲೆಂಡ್ ಪರ ಲ್ಯೂಕಿ ಫರ್ಗ್ಯುಸನ್’ಗೆ ವಿಶ್ರಾಂತಿ ನೀಡಿ ಹೊಸ ಮುಖ ಬ್ಲೇರ್ ಟಿಕ್ನರ್’ಗೆ ಸ್ಥಾನ ನೀಡಲಾಗಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 80 ರನ್’ಗಳ ಜಯಭೇರಿ ಬಾರಿಸಿ ಆರಂಭಿಕ ಮುನ್ನಡೆ ಪಡೆದಿತ್ತು. ಆಕ್ಲೆಂಡ್’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಿವೀಸ್ ತಂಡವನ್ನು 7 ವಿಕೆಟ್’ಗಳ ಅಂತರದಲ್ಲಿ ಮಣಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇದೀಗ ಮೂರನೇ ಪಂದ್ಯ ಕುತೂಹಲವನ್ನು ಹುಟ್ಟುಹಾಕಿದೆ.

ತಂಡಗಳು ಹೀಗಿವೆ:

ಭಾರತ:

ನ್ಯೂಜಿಲೆಂಡ್: