ಬೆಂಗಳೂರು[ಆ.30]: ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇದೀಗ ಆರಂಭಗೊಂಡಿದ್ದು, ಸೌಥ್’ಹ್ಯಾಂಪ್ಟನ್ ಮೈದಾನದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಕಸರತ್ತು ನಡೆಸಲಿವೆ. ಈಗಾಗಲೇ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಭಾರತ ಈ ಪಂದ್ಯ ಜಯಿಸಿದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ. ಈ ಪಂದ್ಯ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದರೂ ಈ ಕೆಲವು ದಾಖಲೆಗಳು ನಿರ್ಮಾಣವಾಗುವುದನ್ನು ನೋಡಲು ಮಿಸ್ ಮಾಡದಿರಿ. 

ಈಗಾಗಲೇ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಕೇವಲ ಒಂದು ರನ್’ಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

1 ವಿಕೆಟ್: ಇಶಾಂತ್ ಶರ್ಮಾ ಕೇವಲ ಇನ್ನೊಂದು ವಿಕೆಟ್ ಕಬಳಿಸಿದರೆ ಅತಿ ನಿಧಾನವಾಗಿ 250 ವಿಕೆಟ್ ಕಬಳಿಸಿದ ಜಗತ್ತಿನ ಎರಡನೇ ವೇಗದ ಬೌಲರ್ ಎನ್ನುವ ಸಾಧನೆ ಮಾಡಲಿದ್ದಾರೆ. ಅತಿ ನಿಧಾನವಾಗಿ 250 ವಿಕೆಟ್ ಪೂರೈಸಿದ ಬೌಲರ್ ಎನ್ನುವ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಜ್ಯಾಕ್ ಕಾಲಿಸ್ ಅವರ ಹೆಸರಿನಲ್ಲಿದೆ.

3ನೇ ನಾಯಕ: ಕೊಹ್ಲಿ ಸೌಥ್’ಹ್ಯಾಂಪ್ಟನ್ ಟೆಸ್ಟ್ ಪಂದ್ಯವನ್ನು ಜಯಿಸಿದರೆ, ಏಷ್ಯಾ ಖಂಡದಾಚೆ ಸತತ ಎರಡು ಟೆಸ್ಟ್ ಪಂದ್ಯ ಗೆದ್ದುಕೊಟ್ಟ ಮೂರನೇ ಟೀಂ ಇಂಡಿಯಾ ನಾಯಕ ಎನ್ನುವ ಖ್ಯಾತಿಗೆ ವಿರಾಟ್ ಕೊಹ್ಲಿ ಭಾಜನರಾಗಲಿದ್ದಾರೆ. ಈ ಮೊದಲು ಗಂಗೂಲಿ 2005ರಲ್ಲಿ ಜಿಂಬಾಬ್ವೆ ವಿರುದ್ದ ಹಾಗೂ ಕಪಿಲ್ ದೇವ್ ನಾಯಕತ್ವದಲ್ಲಿ 1986ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

6 ರನ್: ವಿರಾಟ್ ಕೊಹ್ಲಿ ಇನ್ನು ಕೇವಲ ಆರು ರನ್ ಪೂರೖಸಿದರೆ, 6 ಸಾವಿರ ರನ್ ಪೂರೈಸಿದಂತಾಗುತ್ತದೆ. ಈ ಮೂಲಕ ಅತಿವೇಗವಾಗಿ 6 ಸಾವಿರ ರನ್ ಪೂರೈಸಿದ ಭಾರತದ ಎರಡನೇ ಹಾಗೂ ವಿಶ್ವದ 9ನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆಯಲಿದ್ದಾರೆ.

6 ವಿಕೆಟ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್’ಸನ್ ಇನ್ನು ಕೇವಲ 6 ವಿಕೆಟ್ ಕಬಳಿಸಿದರೆ ಆಸೀಸ್ ದಿಗ್ಗಜ ಬೌಲರ್ ಗ್ಲೇನ್ ಮೆಗ್ರಾಥ್ ದಾಖಲೆ ಸರಿಗಟ್ಟಲಿದ್ದಾರೆ. ಆ್ಯಂಡರ್’ಸನ್ ಇದೀಗ 557 ವಿಕೆಟ್ ಕಬಳಿಸಿದ್ದು ಇನ್ನು 6 ವಿಕೆಟ್ ಕಬಳಿಸಿದರೆ ಮೆಗ್ರಾಥ್[563] ದಾಖಲೆ ಸರಿಗಟ್ಟಿದಂತಾಗುತ್ತದೆ.